ಈಗೀನ ಫ್ಯಾಷನ್ (Fashion) ಜಮಾನದಲ್ಲಿ ರೆಡಿಮೇಡ್ ಸೀರೆಗಳು (Ready Made Saree) ಇದೀಗ ಯುವತಿಯರನ್ನು ಸೆಳೆದಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನಲ್ಲಿ ಈ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ. ಆದರೆ ಎಲ್ಲಾ ರೆಡಿ ಸೀರೆಗಳು ಒಂದೇ ಬಗೆಯಲ್ಲಿ ಕಾಣಿಸುವುದಿಲ್ಲ. ಒಂದೊಂದು ಡಿಫರೆಂಟ್ ಲುಕ್ ನೀಡುತ್ತವೆ. ಹಾಗಾಗಿ ರೆಡಿ ಸೀರೆಗಳನ್ನು ಖರೀದಿಸುವಾಗ ಅವುಗಳ ವಿನ್ಯಾಸ ನೋಡಿ ಆಯ್ಕೆ ಮಾಡುವುದು ಹಾಗೂ ನಂತರ ಸ್ಟೈಲಿಂಗ್ ಡ್ರೇಪಿಂಗ್ ಮಾಡುವ ರೀತಿ ನೀತಿ ಪಾಲಿಸುವುದು ಮುಖ್ಯ.
ಹೌದು, ಇಂದು ಫಟಾಫಟ್ ಆಗಿ ಸೀರೆ ಉಡುವ ಯುವತಿಯರ ವಾರ್ಡ್ರೋಬ್ ಲಿಸ್ಟ್‌ಗೆ ಬಗೆಬಗೆಯ ರೆಡಿಮೇಡ್ ಸೀರೆಗಳು ಲಗ್ಗೆ ಇಡುತ್ತಿವೆ. ಒಂದಕ್ಕಿಂತ ಒಂದು ಆಕರ್ಷಕ ವಿನ್ಯಾಸದಲ್ಲಿ ದೊರೆಯುತ್ತಿವೆ. ಆದರೆ ಈ ಸೀರೆಗಳನ್ನು ಖರೀದಿಸುವಾಗ ಮಾತ್ರ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಕೊಟ್ಟ ಬೆಲೆಗೆ ತಕ್ಕನಾಗಿ ಉಡಬಹುದು ಹಾಗೂ ನಾನಾ ಸ್ಟೈಲಿಂಗ್ ಡ್ರೇಪಿಂಗ್ ಮಾಡಿ ಆಕರ್ಷಕವಾಗಿ ಕಾಣಿಸಬಹುದು.
ರೆಡಿಮೇಡ್ ಸೀರೆಗಳನ್ನು ಆಯ್ಕೆ ಮಾಡುವಾಗ ಮೊದಲು ಅವು ಟ್ರೆಂಡ್‌ನಲ್ಲಿವೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ಬಾಲಿವುಡ್ ಸೆಲೆಬ್ರೆಟಿಗಳ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿದಲ್ಲಿ ಹೊಸ ಟ್ರೆಂಡಿ ರೆಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ರೆಡಿ ಸೀರೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸೆರಗು ಒಂದು ಕಡೆ, ಪಲ್ಲು ಒಂದು ಕಡೆ ಸರಿಯಾಗಿ ಕೂರದಿರಬಹುದು. ಅಲ್ಲದೇ ಸ್ಲಿಮ್ ಇರುವವರ ರೆಡಿ ಸೀರೆ ದಪ್ಪ ಇರುವವರಿಗೆ ಆಗದಿರಬಹುದು. ಹಾಗಾಗಿ ಈ ಸೀರೆಗಳನ್ನು ಉಡುವವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು.
ಬಹುತೇಕ ರೆಡಿ ಸೀರೆಗಳು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ. ಟ್ರೆಡಿಷನಲ್ ಲುಕ್ ನೀಡುವ ರೆಡಿ ಸೀರೆಗಳು ಹೆಚ್ಚಿನ ಡಿಸೈನ್‌ನಲ್ಲಿ ದೊರೆಯುವುದಿಲ್ಲ. ಹಾಗಾಗಿ ಆದಷ್ಟೂ ಟ್ರೆಡಿಷನಲ್ ಸೀರೆಗಳನ್ನು ರೆಡಿಮೇಡ್ ಆಗಿ ಖರೀದಿಸದಿರಿ. ಬದಲಿಗೆ ವೆಸ್ಟರ್ನ್ ಲುಕ್ ನೀಡುವಂತಹದ್ದನ್ನೇ ಸೆಲೆಕ್ಟ್ ಮಾಡಿ.
ಸೀರೆ ಖರೀದಿಸುವಾಗ ಮೊದಲೇ ನೀವು ಆಯ್ಕೆ ಮಾಡುವ ರೆಡಿ ಸೀರೆ ಹೇಗೆಲ್ಲಾ ಉಡಬಹುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಎಲ್ಲದಕ್ಕಿಂತ ಹೆಚ್ಚಾಗಿ, ತೀರಾ ಸಿಂಪಲ್ ಆಗಿ ಉಡುವುದಾದಲ್ಲಿ ರೆಡಿ ಸೀರೆ ಖರೀದಿಸುವುದೇ ಬೇಕಾಗಿಲ್ಲ. ಕೆಲವು ಮೂರ್ನಾಲ್ಕು ಶೈಲಿಯಲ್ಲಿ ಡ್ರೇಪಿಂಗ್ ಮಾಡುವ ರೆಡಿ ಸೀರೆಗಳು ದೊರೆಯುತ್ತವೆ. ಅಂತದ್ದನ್ನೇ ಕೊಳ್ಳಿ. ಆದಷ್ಟೂ ಡ್ರೇಪಿಂಗ್‌ಗೆ ಪ್ರಾಮುಖ್ಯತೆ ನೀಡಿ.
ರೆಡಿ ಸೀರೆಗಳ ಸ್ಟೈಲಿಂಗ್ ಆಯಾ ಸೀರೆಯ ವಿನ್ಯಾಸಕ್ಕೆ ಮ್ಯಾಚ್ ಆಗುವಂತಿರಲಿ. ಉದಾಹರಣೆಗೆ, ಕಾಕ್‌ಟೈಲ್ ರೆಡಿ ಸೀರೆ, ಪಾರ್ಟಿವೇರ್ ರೆಡಿ ಸೀರೆ, ಗೌನ್ ರೆಡಿ ಸೀರೆ, ಲೆಹೆಂಗಾ ರೆಡಿ ಸೀರೆ ಹೀಗೆ ಆಯಾ ಸೀರೆಯ ವಿನ್ಯಾಸಕ್ಕೆ ತಕ್ಕಂತೆ ಸ್ಟೈಲಿಂಗ್ ಇರಲಿ. ಹೇರ್‌ಸ್ಟೈಲ್ ಸೇರಿದಂತೆ ಮೇಕಪ್ ಕೂಡ ಹೊಂದಬೇಕು.