ನವದೆಹಲಿ: ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಹರಡುವಿಕೆ ಮಧ್ಯೆ ಆಫ್ರಿಕಾ ಸೇರಿದಂತೆ ಯಾವುದೇ ದೇಶಕ್ಕೆ ವೈದ್ಯಕೀಯ ಉಪಕರಣಗಳು ಮತ್ತು ಜೀವರಕ್ಷಕ ಔಷಧಿಗಳನ್ನು ಪೂರೈಸಲು ನಮ್ಮ ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಯೊಂದಿಗೆ ಯಾವುದೇ ದೇಶವು ಮುಂದೆ ಬಂದರೂ ಅವರಿಗೆ ವೈದ್ಯಕೀಯ ಉಪಕರಣಗಳು, ನೆರವು ಮತ್ತು ಸಹಯೋಗವನ್ನು ನೀಡಲು ನಾವು ಸಿದ್ಧರಿದ್ದೇವೆ. ವೈರಸ್ ಗುಣಲಕ್ಷಣ ಅಥವಾ ಜೀನೋಮಿಕ್ ಕಣ್ಗಾವಲು ಆಗಿರಲಿ, ನಮ್ಮ ವೈದ್ಯಕೀಯ ಸಹಕಾರ ಅಥವಾ ಸಹಯೋಗವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದಿದ್ದಕ್ಕೆ ಮಸೀದಿ ಅಧ್ಯಕ್ಷ ಸ್ಥಾನದಿಂದ ವಜಾ
Advertisement
Advertisement
ವಿಮಾನಗಳ ನಿರ್ಬಂಧದ ಕುರಿತು ಮಾತನಾಡಿದ ಅವರು, ಓಮಿಕ್ರಾನ್ ಬರುತ್ತೆ ಎಂದು ಕೆಲವು ದೇಶಗಳು ಕೆಲವೊಂದು ಪ್ರದೇಶದಿಂದ ವಿಮಾನಗಳನ್ನು ನಿಲ್ಲಿಸಿವೆ. ಆದರೆ ಅದನ್ನು ನಾವು ಮಾಡಿಲ್ಲ ಎಂದರು.
Advertisement
ನಾವು ಸೋಂಕು ಇರುವ ದೇಶಗಳಿಂದ ಬರುವವರ ಮೇಲೆ ಕಣ್ಗಾವಲನ್ನು ಇಟ್ಟಿದ್ದೇವೆ. ಅದಕ್ಕೆ ನಮ್ಮ ಕಾರ್ಯವಿಧಾನಗಳು ಮತ್ತು ಪ್ರೋಟೋಕಾಲ್‍ಗಳನ್ನು ತೀವ್ರಗೊಳಿಸಿದ್ದೇವೆ. ಇದನ್ನು ಕೇವಲ ಓಮಿಕ್ರಾನ್‍ಗೆ ಸೀಮಿತವಾಗಿಸಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್ವಾಲ್ ಈ ಕುರಿತು ಮಾತನಾಡಿದ್ದು, ಅಪಾಯದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿದೆ. ಅವರನ್ನು ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಒಂದು ವೇಳೆ ಅವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದರೆ, ಅವರಿಗೆ ಕ್ಲಿನಿಕಲ್ ಮ್ಯಾನೇಜ್‍ಮೆಂಟ್ ಪ್ರೋಟೋಕಾಲ್ ಅಡಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದೆ.
ಅಪಾಯದಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಕೋವಿಡ್-19 ನೆಗೆಟಿವ್ ಬಂದರೂ ಅವರನ್ನು 7 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಸಮಂತಾ ಬ್ಯೂಟಿಯನ್ನು ಹೊಗಳಿದ ಕಂಗನಾ
ಕಳೆದ ತಿಂಗಳು, ಓಮಿಕ್ರಾನ್ ಪೀಡಿತ ದೇಶಗಳೊಂದಿಗೆ ಭಾರತವು ತನ್ನ ಒಗ್ಗಟ್ಟನ್ನು ವ್ಯಕ್ತಪಡಿಸಿತ್ತು. ನಾವು ವೈರಸ್‍ನಿಂದ ಬಳಲುತ್ತಿರುವ ದೇಶದ ಜೊತೆ ಇರುತ್ತೇವೆ ಎಂದು ಭಾರತ ಭರವಸೆಯನ್ನು ನೀಡಿದೆ.
ಪ್ರಸ್ತುತ ಭಾರತದ ಕರ್ನಾಟಕದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ದೃಢಪಟ್ಟ ಎರಡು ಪ್ರಕರಣಗಳು ವರದಿಯಾಗಿದೆ.