ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರೊಬ್ಬರ ತಂದೆ ಮಗನ ಸಾವಿನ ನೋವಿನಲ್ಲೂ ದೇಶದ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದಾರೆ.
ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧ ರತನ್ ಠಾಕೂರ್ ಜೈಶ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಿಂದ ಹುತಾತ್ಮರಾಗಿದ್ದಾರೆ. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನ ಅಂತ್ಯ ಈ ರೀತಿ ಆಗುತ್ತದೆ ಎಂದು ಯಾರು ಯೋಚಿಸಲು ಸಾಧ್ಯವಿರಲಿಲ್ಲ. ಯೋಧ ರತನ್ ಠಾಕೂರ್ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆ ಮತ್ತೊಬ್ಬ ಮಗನನ್ನು ಕೂಡ ದೇಶ ಸೇವೆಗೆ ಕಳುಹಿಸಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ
Advertisement
Advertisement
ರತನ್ ಠಾಕೂರ್ ಅವರು ಮೂಲತಃ ಬಿಹಾರದ ಭಾಗಲ್‍ಪುರದವರು. ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ತಂದೆ, ದೇಶಕ್ಕಾಗಿ ಓರ್ವ ಮಗನನ್ನು ಅರ್ಪಿಸಿದ್ದೇನೆ. ಈಗ ಇರುವ ಇನ್ನೊಬ್ಬ ಮಗನನ್ನೂ ಉಗ್ರರ ವಿರುದ್ಧ ಹೋರಾಡಲು ಕಳುಹಿಸಲು ಸಿದ್ಧನಿದ್ದೇನೆ. ಯೋಧರನ್ನು ಬಲಿಪಡೆದಿರುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಎಂದು ಠಾಕೂರ್ ಅವರ ತಂದೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಒಳಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂಬ ಕನಸನ್ನು ಬಿಟ್ಟುಬಿಡಿ- ಪಾಕಿಗೆ ಮೋದಿ ಸಂದೇಶ
Advertisement
CRPF Personnel Ratan Thakur's (who lost his life in #PulwamaTerrorAttack ) father in Bhagalpur: I have sacrificed a son in Mother India's service, I will send my other son as well to fight, ready to give him up for Mother India, but Pakistan must be given a befitting reply.#Bihar pic.twitter.com/rI6cM38Agh
— ANI (@ANI) February 15, 2019
Advertisement
ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 47 ಮಂದಿ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv