ಯಶಸ್ವಿನ ಅಲೆಯಲ್ಲಿ ತೇಲುತ್ತಿದ್ದ ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty), ಇದೀಗ ಸಾಲು ಸಾಲು ಸೋಲುಗಳನ್ನು ಕಂಡು ಗಾಬರಿ ಬಿದ್ದಿದ್ದಾರೆ. ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದವರು, ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಈ ಹಿಂದೆ ಬಿಕಿನಿ ತೊಡಲ್ಲ, ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದವರು. ಈಗ ಅದಕ್ಕೆ ರೆಡಿ ಎಂದು ನಿರ್ಮಾಪಕರಿಗೆ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ (Hrithik Roshan) ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. ಆ ನಂತರ ನಟಿಸಿದ ಕೆಲ ಚಿತ್ರಗಳು ಗೆಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದರಲ್ಲಿ ಸೋತಿತ್ತು.
ತಮಿಳಿನ ಸಿನಿಮಾವೊಂದರಲ್ಲಿ (Tamil Film) ಕೃತಿ ಶೆಟ್ಟಿಗೆ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾಗ, ಹೆಚ್ಚನ ಸಂಭಾವನೆ ಕೇಳಿದ್ದರಂತೆ. ಕೃತಿ ಶೆಟ್ಟಿ ಈವರೆಗೂ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿಕ್ಕೊಂಡಿತ್ತು. ಆದರೆ, ಅವರು ಬಿಕಿನಿ ಧರಿಸೋಕೆ ಭಾರೀ ಮೊತ್ತವನ್ನೇ ಕೇಳಿದ್ದರಂತೆ.
ಬಿಕಿನಿ ಧರಿಸಲು ಓಕೆ ಎನ್ನುತ್ತಲೇ ಬಿಕಿನಿ ಧರಿಸೋಕೆ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿತ್ತು. ಚಿತ್ರತಂಡ ಕೂಡ ಕೃತಿ ಮಾತಿಗೆ ಗ್ರೀನ್ ಸಿಗ್ನಲ್ ಕೊಟ್ಟು ಹಣ ನೀಡಿತ್ತು. 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದು ಅಚ್ಚರಿ ತಂದಿತ್ತು.