ಜೈಪುರ: ದೇಶಿ ಕ್ರಿಕೆಟ್‍ನಲ್ಲಿ ರನ್ ಮಳೆ ಸುರಿಸುತ್ತಿದ್ದ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡಕ್ಕಾಗಿ ಆಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ನೂತನ ಆಲ್‌ರೌಂಡರ್‌ನ ಎಂಟ್ರಿಯಾಗಿದೆ.
Advertisement
ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್ ಗೆ ಸಲ್ಲುತ್ತದೆ. ಪಾಯಿಂಟ್ ಟೇಬಲ್‍ನಲ್ಲಿ 7ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ತಂಡ ಫೈನಲ್‍ಗೇರಲು ತಮ್ಮ ಆಲ್‍ರೌಂಡರ್ ಪ್ರದರ್ಶನದ ಮೂಲಕ ಅಯ್ಯರ್ ನೆರವಾಗಿದ್ದರು. ಕೋಲ್ಕತ್ತಾ ಪರ 10 ಪಂದ್ಯಗಳನ್ನು ಆಡಿದ ಅಯ್ಯರ್ 4 ಅರ್ಧಶತಕ ಸಹಿತ 370 ರನ್ ಮತ್ತು 3 ವಿಕೆಟ್ ಕಿತ್ತು ಆಲ್‍ರೌಂಡರ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ
Advertisement
Advertisement
ಐಪಿಎಲ್ ಪ್ರದರ್ಶನದ ಬಳಿಕ ನನಗೆ ಭಾರತ ತಂಡದ ಪರ ಆಡುವ ಕನಸಿದೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದಿದ್ದರು. ಆ ಬಳಿಕ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದಾಗ ನಾನು ಟೀಂ ಇಂಡಿಯಾ ಪರ ಆಡಲು ಉತ್ಸಾಹಕನಾಗಿದ್ದು, ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಸಿದ್ಧರಿರುವುದಾಗಿ ಸಂತೋಷ ವ್ಯಕ್ತಪಡಿಸಿದ್ದರು.
Advertisement
ಐಪಿಎಲ್‍ನಲ್ಲಿ ಅಯ್ಯರ್ ಅಮೋಘ ಆಟ ನೋಡಿದ ಟೀಂ ಇಂಡಿಯಾ ಆಯ್ಕೆ ಸಮಿತಿ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದೆ. ಅದರಂತೆ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಮಧ್ಯಮ ವೇಗದ ಬೌಲಿಂಗ್ ಆಲ್‍ರೌಂಡರ್ ಒಬ್ಬರ ಉದಯವಾಗಿದೆ. ಟೀಂ ಇಂಡಿಯಾದ ಖಾಯಂ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಫಿಟ್ನೇಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಜಾಗಕ್ಕೆ ಅಯ್ಯರ್ ಎಂಟ್ರಿಕೊಟ್ಟಿದ್ದಾರೆ. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ
Road to 2022 T20 World Cup starts from Jaipur!
Whatta memorable moment for young Venkatesh Iyer, who gets his maiden India cap!#INDvNZ #INDvsNZ #RahulDravid #VenkateshIyer #RohitSharmapic.twitter.com/2rDFFAAPF4
— OneCricket (@OneCricketApp) November 17, 2021
ಐಪಿಎಲ್‍ನಲ್ಲಿ ಕಮಾಲ್ ಮಾಡಿದ ಅಯ್ಯರ್ ಟೀಂ ಇಂಡಿಯಾದಲ್ಲಿ ಕೂಡ ಮಿಂಚುಹರಿಸಿದರೆ ಭಾರತತಂಡದಲ್ಲಿ ಖಾಯಂ ಸದಸ್ಯನಾಗಬಹುದು ಹಾಗಾಗಿ ಅಯ್ಯರ್ ಟೀಂ ಇಂಡಿಯಾದ ಭವಿಷ್ಯದ ಆಟಗಾರನಾಗಿದ್ದು ಸಿಕ್ಕ ಅವಕಾಶವನ್ನು ಯಾವರೀತಿ ಬಲಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ