ಕೊಪ್ಪಳ: ನೀವು ಬೇಕರಿ ತಿನಿಸುಗಳ ಪ್ರಿಯರಾಗಿದ್ರೆ ಖಂಡಿತವಾಗ್ಲೂ ಈ ಸ್ಟೋರಿ ಓದ್ಲೇಬೇಕು. ರುಚಿ ರುಚಿಯಾದ ಬೇಕರಿ ತಿನಿಸು, ಎಗ್ ರೈಸ್ ಚಪ್ಪರಿಸೋ ಮುನ್ನ ಆ ಮೊಟ್ಟೆ ಎಂಥದ್ದು ಎಂಬ ಬಗ್ಗೆ ಒಮ್ಮೆ ಯೋಚಿಸಿ. ಇಲ್ಲವಾದ್ರೆ ನಿಮ್ಮ ಆರೋಗ್ಯ ಹದಗೆಡೋದು ಗ್ಯಾರಂಟಿ.
ಹೌದು. ರಾಜ್ಯದಲ್ಲಿಯೇ ಕುಕ್ಕಟ ಉದ್ದಿಮೆಗೆ ಖ್ಯಾತಿ ಪಡೆದಿರೋ ಜಿಲ್ಲೆಯಲ್ಲಿ ಡ್ಯಾಮೇಜ್ ಮೊಟ್ಟೆ ದಂಧೆ ನಡೀತಿದೆ. ಮೊಟ್ಟೆ ವಿಷಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇಂಥದ್ದೊಂದು ಎಚ್ಚರಿಕೆ ಮಾತು ಕೇಳಿ ಬರ್ತಿದೆ. ಯಾಕಂದ್ರೆ ಜಿಲ್ಲೆಯಲ್ಲಿ ಕೆಟ್ಟು, ಕೊಳಕು ನಾರುವ ಮೊಟ್ಟೆಗಳನ್ನ ಬೇಕರಿ ಅಂಗಡಿಗೆ ಬಿಕರಿ ಮಾಡ್ತಿದ್ದಾರೆ ಕೆಲ ಕೋಳಿ ಫಾರ್ಮ್ ಮಾಲೀಕರು. ಇದ್ರಿಂದ ಕಡಿಮೆ ದರದಲ್ಲಿ ಮೊಟ್ಟೆ ಖರೀದಿಸಿ ಬೇಕರಿ ಮಾಲೀಕರು ಹಣ ಜೇಬಿಗಿಳಿಸ್ತಿದ್ರೆ ಕೊಳಕು ಮೊಟ್ಟೆಯಿಂದ ತಯಾರಿಸಿದ ತಿನಿಸು ತಿಂದು ಜನರ ಆರೋಗ್ಯ ಹದಗೆಡ್ತಿದೆ.
Advertisement
Advertisement
ಇಂಥದ್ದೊಂದು ದಂಧೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರೋ ಮಾಣಿಕ್ಯಂ ಕೋಳಿ ಫಾರಂನಲ್ಲಿ ಎಗ್ಗಿಯಿಲ್ಲದೆ ನಡೀತಿತ್ತು. ಇದರ ಮೇಲೆ ಕಣ್ಣಿಟ್ಟಿದ್ದ ಯುವಬ್ರಿಗೇಡ್ ಕಾರ್ಯಕರ್ತರು ಕೊಳಕು ಮೊಟ್ಟೆ ಸಾಗಿಸ್ತಿದ್ದ ಟಂಟಂ ತಡೆದು ಪೊಲೀಸರಿಗೊಪ್ಪಿಸಿದ್ದಾರೆ. ಈ ಮೂಲಕ ಕೊಳಕು ಮೊಟ್ಟೆ ಮಾರಾಟ ದಂಧೆಯ ಜಾಲ ಪತ್ತೆ ಹಚ್ಚಿದ್ದಾರೆ.
Advertisement
ಇದನ್ನೂ ಓದಿ: ಪ್ರತಿದಿನ ಮೊಟ್ಟೆ ತಿಂತೀರಾ? ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು
Advertisement
ಇಂಥದ್ದೊಂದು ಜಾಲ ಪತ್ತೆಯಾಗುತ್ತಿದ್ದಂತೆ ಮೊಟ್ಟೆಪ್ರಿಯರು ತಳಮಳಗೊಂಡಿದ್ದಾರೆ. ಮೊಟ್ಟೆಯಿಂದ ತಯಾರಿಸಿದ ಬೇಕರಿ ತಿನಿಸುಗಳನ್ನ ಖರೀದಿಸಲು ಹಿಂದೇಟು ಹಾಕ್ತಿದ್ದಾರೆ. ಒಡೆದ, ಹುಳುಗಳು ತುಂಬಿಕೊಂಡು ಗಬ್ಬು ನಾರುವ ಮೊಟ್ಟೆಗಳನ್ನು ಪಾತ್ರೆಗಳಲ್ಲಿ ತುಂಬಿ ವಾಹನಗಳಲ್ಲಿ ಕುಷ್ಟಗಿ ಸೇರಿದಂತೆ ಗಂಗಾವತಿ, ಕೊಪ್ಪಳ, ಇಲಕಲ್ ಇನ್ನಿತರ ಕಡೆ ಇರುವ ಬೇಕರಿಗಳಿಗೆ ಸಾಗಣೆ ಮಾಡ್ತಿದ್ರು ಮಾಣಿಕ್ಯಂ ಕೋಳಿ ಫಾರ್ಮ್ ಮಾಲೀಕ ರಾಮಮನೋಹರ್. ಜಿಲ್ಲೆಯಲ್ಲಿ ಇಂಥಹ ಸಾಕಷ್ಟು ಪ್ರಕರಣಗಳಿವೆ. ಪೊಲೀಸರು ಪತ್ತೆಹಚ್ಚಬೇಕು ಅಂತಾರೆ ಹೋರಾಟಗಾರರು.
ಇದನ್ನೂ ಓದಿ: ಅಕ್ಕಿ, ಮೊಟ್ಟೆ ಆಯ್ತು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪ್ಲಾಸ್ಟಿಕ್ ಕ್ಯಾಬೇಜ್ – ವಿಡಿಯೋ ನೋಡಿ
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಬೇಕರಿ ತಿನಿಸು ತಿನ್ನಲು ಮುಗಿಬೀಳ್ತಾರೆ. ಅದನ್ನ ಸೇವಿಸೋ ಮುನ್ನ ಯೋಚಿಸಿ ಅನ್ನೋದು ನಮ್ಮ ಕಾಳಜಿ.