ಬೆಂಗಳೂರು: ಕಾಯಿಲೆ ಬಂದಾಗ ಸರ್ಕಾರಿ ಆಸ್ಪತ್ರೆಗ ಹೋಗೋ ನೀವು ಅಲ್ಲಿ ಸರಬರಾಜಾಗೋ ಔಷಧಿಗಳ ಗುಣಮಟ್ಟ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಬರಾಜಾಗೋ ಔಷಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಔಷಧಿಗಳು ಕಳೆಪ ಗುಣಮಟ್ಟದಿಂದ ಕೂಡಿರೋದು ಎಂಬ ಆತಂಕಕಾರಿ ವರದಿಯನ್ನ ಸಿಎಜಿ (Comptroller and Auditor General of India) ನೀಡಿದೆ.
20 ರಾಜ್ಯಗಳಲ್ಲಿ ಕಪ್ಪು ಪಟ್ಟಿ (ಬ್ಲ್ಯಾಕ್ ಲಿಸ್ಟ್) ಗೆ ಸೇರಿರುವ ಕಂಪೆನಿಗಳ ಜೊತೆ ಅಧಿಕಾರಿಗಳು ಔಷಧಿ ಖರೀದಿ ಮಾಡಿದ್ದಾರೆ. 2014 ರಿಂದ 17 ರ ವರೆಗೆ ರಾಜ್ಯಕ್ಕೆ 14,209 ಬ್ಯಾಚ್‍ಗಳಲ್ಲಿ ಔಷಧಿ ಸರಬರಾಜು ಆಗಿದೆ. ಇವುಗಳಲ್ಲಿ 7,433 ಬ್ಯಾಚ್ ಅಂದರೆ ಅರ್ಧಕ್ಕಿಂತ ಹೆಚ್ಚು ಕಳೆಪ ಗುಣಮಟ್ಟದ ಔಷಧಿಗಳನ್ನು ಆಸ್ಪತ್ರೆ ಮುಖಾಂತರ ರೋಗಿಗಳಿಗೆ ಸರಬರಾಜಾಗಿದೆ ಎಂಬ ಆತಂಕಕಾರಿ ವರದಿಯಲ್ಲಿ ಹೇಳಲಾಗಿದೆ.
Advertisement
ಸರ್ಕಾರಿ ನೊಂದಾಯಿತ ಲ್ಯಾಬೋರೇಟರಿನ ಸಹ ಕಳೆಪ ಗುಣಗುಣಮಟ್ಟದ ಔಷಧಿಗೆ ಫುಲ್ ಮಾರ್ಕ್ ನೀಡಿದೆ ಅಂತಾನು ವರದಿ ನೀಡಿದೆ. ವಿಪರ್ಯಾಸ ಅಂದ್ರೆ ಸಿಎಜಿ ವರದಿ ಮೇಲೆ ಇದುವರೆಗು ಯಾವ ಅಧಿಕಾರಿ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳದೇ ಇರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.