ಬೆಂಗಳೂರು: ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಗೆ ಸ್ಟೆಪ್ ಹಾಕುವ ವಿದ್ಯಾರ್ಥಿಗಳೇ ಹುಷಾರ್. ಯಾಕೆಂದರೆ ಸಿಕ್ಕ ಸಿಕ್ಕ ಹಾಡುಗಳಿಗೆಲ್ಲ ಸ್ಟೆಪ್ ಹಾಕಿ ಕುಣಿದರೆ ಶಾಲೆ ಮೇಲೆ ಕೇಸ್ ಬೀಳುತ್ತದೆ.
ಹೌದು.. ಶಾಲೆಯ ವಾರ್ಷಿಕೋತ್ಸವ ಬಂತು ಅಂದರೆ ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ.. ಡ್ಯಾನ್ಸ್, ನಾಟಕ, ಹಾಡು ಎಲ್ಲವನ್ನು ಮನರಂಜನೆಗಾಗಿ ಮಾಡುತ್ತಾರೆ. ಆದರೆ ಇನ್ನು ಮುಂದೆ ಶಾಲಾ ವಾರ್ಷಿಕೋತ್ಸವಕ್ಕೆ ಸಿಕ್ಕ ಸಿಕ್ಕ ಸಿನಿಮಾ ಹಾಡುಗಳಿಗೆಲ್ಲ ಡ್ಯಾನ್ಸ್ ಮಾಡುವಂತಿಲ್ಲ. ಯಾಕೆಂದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಿನಿಮಾ ಸಾಂಗ್ಸ್ ಗಳಿಗೆ ಡ್ಯಾನ್ಸ್ ಮಾಡುವ ಹಾಗಿಲ್ಲ ಅಂತ ಸುತ್ತೋಲೆ ಹೊರಡಿಸಲು ತಯಾರಾಗಿದೆ.
Advertisement
Advertisement
ಇತ್ತೀಚಿನ ದಿನದಲ್ಲಿ ಶಾಲಾ ಮಕ್ಕಳು ಅಶ್ಲೀಲ ಹಾಡುಗಳಿಗೆಲ್ಲ ಸ್ಟೆಪ್ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋದು ಶಿಕ್ಷಣ ಇಲಾಖೆಯ ಲೆಕ್ಕಾಚಾರವಾಗಿದೆ. ಸರ್ಕಾರದ ಈ ನಿರ್ಧಾರವನ್ನ ಮಕ್ಕಳ ಹಕ್ಕು ಸಂಸ್ಥೆ ಸ್ವಾಗತಿಸಿದೆ.
Advertisement
ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವಷ್ಟು ಅಶ್ಲೀಲ ಸಾಂಗ್ ಗಳಿಗೆ ಮೊದಲು ಸೆನ್ಸಾರ್ ಕತ್ತರಿ ಹಾಕಬೇಕಾಗಿದೆ. ಇತ್ತೀಚಿನ ದಿನದಲ್ಲಿ ಈ ಸಿನಿಮಾ ಧಾರಾವಾಹಿಗಳಿಂದ ಮಕ್ಕಳ ಮನಸ್ಸಿನ ಮೇಲೆ ತೀರಾ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಫಿಲ್ಮ್ ಬೋರ್ಡ್ ಕೂಡ ಗಮನ ಹರಿಸಬೇಕು ಎಂದು ಸಂಸ್ಥೆ ತಿಳಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv