ಬೀದರ್: ಕ್ಯಾರೆಟ್ ತಿಂದ್ರೆ ವಿಟಮಿನ್ ಎ ಸಿಗುತ್ತೆ, ಕಣ್ಣಿಗೆ ಒಳ್ಳೆಯದು. ಹೀಗಾಗಿ ಮಾರುಕಟ್ಟೆಗಳಲ್ಲಿ ಕ್ಯಾರೆಟ್ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತೆ. ಆದ್ರೆ ಸದ್ಯ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಗಾಢ ಬಣ್ಣದ ಕ್ಯಾರೆಟ್ ತಿನ್ನುವಾಗ ಎಚ್ಚರದಿಂರಬೇಕು.
Advertisement
ಹೌದು. ಬೀದರ್‍ನ ಔರಾದ್ ತಾಲೂಕಿನಲ್ಲಿ ಗಜ್ಜರಿ ವ್ಯಾಪಾರಿಗಳು ದುಪ್ಪಟ್ಟು ಹಣ ಗಳಿಸೋಕೆ ಬಣ್ಣ ಬಳಸಿ ಕಲಬೆರಕೆ ದಂಧೆ ನಡೆಸ್ತಿದ್ದಾರೆ. ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಕ್ಯಾರೆಟ್ ತಿಂದು ಗ್ರಾಹಕರಿಗೆ ಹೊಟ್ಟೆ ನೋವಿನ ಪ್ರಕರಣ ಜಾಸ್ತಿಯಾದಾಗ ತಾಲೂಕು ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬೆರಕೆ ದಂಧೆಕೋರರು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
Advertisement
Advertisement
ಕ್ಯಾರೆಟ್ ಬಣ್ಣ ಗಾಢವಾಗಿಸೋಕೆ ಏನ್ ಮಾಡ್ತಾರೆ?: ಸಕ್ಕರೆ ಮಿಶ್ರಿತ ನೀರಿನಲ್ಲಿ ಕ್ಯಾರೆಟ್ ನೆನೆಸಿಡ್ತಿದ್ದಾರೆ. ರಾತ್ರಿಯಿಡೀ ಸಕ್ಕರೆ ಮಿಶ್ರಿತ ನೀರಲ್ಲಿ ನೆನೆಸಿಟ್ಟ ಕ್ಯಾರೆಟ್‍ಗೆ ಕಲರ್ ಬರುತ್ತೆ. ಇಂಥ ಕಲರ್‍ಗೆ ಮರುಳಾಗಿ ಜನ ಕ್ಯಾರೆಟ್ ಖರೀದಿ ಮಾಡ್ತಾರೆ.
Advertisement
ತಿಂದ್ರೆ ಏನಾಗುತ್ತೆ?: ಈ ಸಕ್ಕರೆ ಲೇಪಿತ ಕ್ಯಾರೆಟ್ ತಿಂದ ಗ್ರಾಹಕರಿಗೆ ಹೊಟ್ಟೆ ನೋವು ಬರುತ್ತೆ. ಅಷ್ಟೇ ಅಲ್ಲದೇ ಮಧುಮೇಹ, ಶ್ವಾಸಕೋಶದ ತೊಂದರೆಗಳು, ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯಗೆ ಸಂಬಂಧಿಸಿದ ಹಲವು ಕಾಯಿಲೆಗಳು ಬರುವುದು ಖಚಿತ ಎಂದು ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ಹೇಳಿದ್ದಾರೆ.