ಪೋಷಕರೇ, ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಹೋಗುವ ಮುನ್ನ ಈ ಸುದ್ದಿ ಓದಿ

Public TV
1 Min Read
RCR BABY 2

ರಾಯಚೂರು: ಒಳಗಡೆಯಿಂದ ಲಾಕ್ ಆದ ಸ್ವಿಫ್ಟ್ ಕಾರಿನಲ್ಲಿ ನಾಲ್ಕು ವರ್ಷದ ಬಾಲಕ ಸುಮಾರು ಎರಡು ಗಂಟೆ ಕಾಲ ಪರದಾಡಿದ ಘಟನೆ ರಾಯಚೂರಿನ ಮಹಾವೀರ ವೃತ್ತದಲ್ಲಿ ನಡೆದಿದೆ.

RCR BABY 1

ಕಾರಲ್ಲಿ ಏಸಿ ಹಾಕಿ ಬಟ್ಟೆ ಅಂಗಡಿಗೆ ತೆರಳಿದ ಬಾಲಕನ ಪೋಷಕರು ಬರುವುದು ತಡವಾಗಿದ್ದರಿಂದ ಹೆದರಿದ ಬಾಲಕ ಅಳಲು ಶುರು ಮಾಡಿದ್ದಾನೆ. ರೆಡ್ಡಿ ಎಂಬವರ ಮಗು ಆಟವಾಡುತ್ತ ಒಳಗಿನಿಂದಲೇ ಕಾರ್ ಲಾಕ್ ಮಾಡಿಕೊಂಡಿದ್ದಾನೆ. ಇದನ್ನ ಗಮನಿಸಿದ ಸಾರ್ವಜನಿಕರು ಕಾರಿನ ಬಾಗಿಲು ತೆರೆಯಲು ಯತ್ನಿಸಿದರು ಸಾಧ್ಯವಾಗಿಲ್ಲ.

RCR BABY 1

ಕಾರಿನ ಕೀ ಒಳಗಡೆ ಇದ್ದಿದ್ದರಿಂದ ಮರಳಿ ಬಂದ ಪೋಷಕರಿಗೂ ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಏನೇ ಪ್ರಯತ್ನ ಮಾಡಿದರೂ ಕಾರಿನ ಬಾಗಿಲು ತೆರೆಯದಿದ್ದರಿಂದ ಕೊನೆಗೆ ಕಾರಿನ ಗಾಜನ್ನ ಹೊಡೆದು ಬಾಲಕನನ್ನು ರಕ್ಷಿಸಲಾಯಿತು. ಇದಾದ ಬಳಿಕ ಪೋಷಕರು ಅಲ್ಲಿಂದ ಬಾಲಕನನ್ನು ಕರೆದುಕೊಂಡು ಹೋದರು.

Share This Article