Connect with us

Bengaluru City

ಅಮೆರಿಕದಲ್ಲಿರೋ ಯಶ್ ಮಹಿಳಾ ಅಭಿಮಾನಿಯ ಇಂಟರೆಸ್ಟಿಂಗ್ ಕಥೆ ಓದಿ

Published

on

ಬೆಂಗಳೂರು: ಕಡಿಮೆ ಸಮಯದಲ್ಲಿಯೇ ಉತ್ತಮ ಚಿತ್ರಗಳನ್ನು ನೀಡಿ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ರಾಕಿಂಗ್ ಸ್ಟಾರ್ ಯಶ್ ಪಡೆದುಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಅವರ ಯಶೋಮಾರ್ಗದ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸಿ ಹಲವರ ಮೆಚ್ಚುಗೆಯನ್ನು ಪಡೆದಿದ್ದಾರೆ. ಯಶ್ ಅಭಿನಯಕ್ಕೆ ದೇಶ, ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಅಮೆರಿಕದ ಪ್ರಜೆಯೊಬ್ಬರು ಯಶ್ ಮೇಲಿರುವ ಅಭಿಮಾನವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೂಲತಃ ಅಮೆರಿಕದ ಲೀ ಎಂ ಸೆಂಟ್ರಾಚಿಯೊ ಎಂಬ ಮಹಿಳೆ ನಾನು ಯಶ್ ಅಭಿಮಾನಿ ಆಗಿದ್ದು ಹೇಗೆ ಎನ್ನುವ ಇಂಟ್ರೆಸ್ಟಿಂಗ್ ವಿಚಾರಗಳನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಯಶ್ ಅಭಿನಯಕ್ಕೆ ನಾನು ಫಿದಾ ಆಗಿದ್ದೇನೆ. ಗೂಗ್ಲಿ ಸಿನಿಮಾ ನೋಡಿ ಯಶ್ ಅಭಿನಯಕ್ಕೆ ನಾನು ಬೌಲ್ಡ್ ಆಗಿದ್ದೇನೆ. ಚಿತ್ರದಲ್ಲಿ ಯಶ್ ನಟನೆ, ಡೈಲಾಗ್, ಸಾಂಗ್ ಎಲ್ಲವೂ ನನ್ನನ್ನು ಅಭಿಮಾನಿಯನ್ನಾಗಿಸಿದೆ ಎಂದು ಲೀ ತಿಳಿಸಿದ್ದಾರೆ.

ಅಂದ ಹಾಗೇ ಕಳೆದ ಮೂರು ವರ್ಷಗಳಿಂದ ಹಿಂದಿ ಭಾಷೆಯನ್ನು ಕಲಿಯುತ್ತಿರುವ ಲೀ ಅವರು ಹಿಂದಿಯಲ್ಲಿ ಡಬ್ ಆಗಿದ್ದ ‘ಗೂಗ್ಲಿ’ ಸಿನಿಮಾವನ್ನು ನೋಡಿದ್ದಾರೆ. ನಂತರ ಯಶ್ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಮತ್ತಷ್ಟು ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಕನ್ನಡ ಕಲಿಕೆ ಆರಂಭ: ಯಶ್ ಕುರಿತು ಹೆಚ್ಚಿನ ಅಧ್ಯಯನ ನಡೆಸಿದಾಗ ಅವರಿಗೆ ಮತ್ತಷ್ಟು ಗೆಳೆಯರು ಸಿಕ್ಕಿದ್ದಾರೆ. ಬಳಿಕ ಅವರಿಂದ ಹಿಂದಿಗೆ ಡಬ್ ಆಗಿರುವ ಸಿಡಿಗಳನ್ನು ತರಿಸಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈಗ ಕನ್ನಡದಲ್ಲೇ ಯಶ್ ಸಿನಿಮಾಗಳನ್ನು ನೋಡಲು ನಿರ್ಧರಿಸಿರುವ ಲೀ, ಒಂದು ವರ್ಷದಿಂದ ಕನ್ನಡ ಭಾಷೆಯನ್ನು ಕಲಿಯಲು ಆರಂಭಿಸಿದ್ದಾರೆ.

ಯಶ್ ಫಾಲೋವಾರ್: ಲೀ ಸಾಮಾಜಿಕ ಜಾಲತಾಣಗಳ ಮೂಲಕ ಯಶ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅಲ್ಲದೇ ಕನ್ನಡ ಭಾಷೆ ಕಲಿಯಲು ಎಲ್ಲರ ಸಹಕಾರವನ್ನು ಕೇಳಿದ್ದಾರೆ. ಯಶ್ ಸಿನಿಮಾಗಳನ್ನು ಅಮೆರಿಕದಲ್ಲಿರುವ ಥಿಯೇಟರ್ ಗಳಲ್ಲಿ ನೋಡಲು ಹಂಬಲ ವ್ಯಕ್ತ ಪಡಿಸಿರುವ ಅವರು, ಯಶ್ ಸಿನಿಮಾಗಳನ್ನು ಅಮೆರಿಕದಲ್ಲಿ ರಿಲೀಸ್ ಮಾಡುವಂತೆ ಮನವಿ ಮಾಡಿದ್ದಾರೆ.

ಕೆಜಿಎಫ್ ನೋಡೋ ಹಂಬಲ: ರಾಕಿಂಗ್ ಸ್ಟಾರ್ ರ ಮುಂದಿನ ಕೆಜಿಎಫ್ ಸಿನಿಮಾ ಕುರಿತು ಮಾಹಿತಿ ಸಂಗ್ರಹಿಸಿರುವ ಲೀ ಅವರು, ಸಿನಿಮಾ ಕೆಜಿಎಫ್ ಗೋಲ್ಡ್ ಫೀಲ್ಡ್ ಕುರಿತು ಕಥೆ ಹೊಂದಿದೆ, ಅಲ್ಲದೇ ಕೆಜಿಎಫ್ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂದು ತಿಳಿಸಿದ್ದು, ಚಿತ್ರ ಬಿಡುಗಡೆಯಾದ ಕೂಡಲೇ ಅಮೆರಿಕದಲ್ಲಿನ ತಮ್ಮ ಸ್ನೇಹಿತರೊಂದಿಗೆ ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ.

ತಮ್ಮ ನಟನೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಯಶ್ ಅವರ ಸಾಮಾಜಿಕ ಕಾರ್ಯಗಳು ಹಾಗೇ ಮುಂದುವರಿಯಲಿ. ಒಬ್ಬ ರೈತನ ಮಗನಾಗಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಅಭಿನಂದನೆ ಹೇಳುತ್ತೇನೆ. ಅಷ್ಟೇ ಅಲ್ಲದೇ ಕನ್ನಡಲ್ಲೇ ಶುಭರಾತ್ರಿ, ಯಶ್ ಅಭಿಮಾನಿಗಳಿಗೂ ಧನ್ಯವಾದಗಳನ್ನು ಹೇಳಿ ಲೀ ತಮ್ಮ ವಿಡಿಯೋ ಮಾತುಕತೆಗೆ ಫುಲ್ ಸ್ಟಾಪ್ ಹೇಳಿದ್ದಾರೆ.

 

1 Comment

Leave a Reply

Your email address will not be published. Required fields are marked *