90ರ ವಯಸ್ಸಿನಲ್ಲಿ ಬಂದು ನಿಮ್ಮ ಬಳಿ ಕೈ ಚಾಚುತ್ತಿದ್ದೇನೆ, ನಿಖಿಲ್ ಗೆಲ್ಲಿಸಿ: ಹೆಚ್‍ಡಿಡಿ ಕಣ್ಣೀರು

Public TV
1 Min Read
hdd

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಸುಗ್ಗನಹಳ್ಳಿ ಗ್ರಾಮದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಪರ ಮಾಜಿ ಪ್ರಧಾನಿ ಹೆಚ್‍ಡಿಡಿ ಅದ್ದೂರಿ ರೋಡ್ ಶೋ ನಡೆಸಿದರು. ಬಳಿಕ ಮಾತನಾಡಿದ ಹೆಚ್.ಡಿ.ದೇವೇಗೌಡ (HD Devegowda) ಭಾವನಾತ್ಮಕವಾಗಿ ನಿಖಿಲ್ ಗೆಲ್ಲಿಸುವಂತೆ ಮನವಿ ಮಾಡಿದರು.

Nikhil Kumarswamy

ನಾನು ಎಲ್ಲಾ ಕಡೆ ಸುತ್ತಾಡಿ ಬಂದಾಗ ಈ ಗ್ರಾಮದ ಹೆಣ್ಣು ಮಗಳು ನನಗೆ ಊಟ ಹಾಕಿದ್ರು. ಈ ಮಣ್ಣಿನ ಅನ್ನದ ಖುಣ ನನ್ನ ಮೇಲಿದೆ. ನಿಮ್ಮ ಮುಂದೆ ಕೈಚಾಚಲಿಕ್ಕೆ ಬಂದಿದ್ದೇನೆ. ನಾನು ಯಾರಿಗೋಸ್ಕರ ಬಂದಿದ್ದೇನೆ ಅಂತ ನಿಮಗೆ ಗೊತ್ತು. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನ ಮೋಸ, ವಂಚನೆ ಮಾಡಿ ಸೋಲಿಸಿದರು. ಇವತ್ತು ರಾಮನಗರದ ಜನತೆ ನಾವಿದ್ದೇವೆ ಅನ್ನೋ ವಿಶ್ವಾಸ ಕೊಟ್ಟಿದ್ದಾರೆ. ನಿಖಿಲ್ ಗೆಲ್ಲಿಸುತ್ತೇವೆ ಎಂಬ ಧೈರ್ಯ ನೀಡ್ತಿದ್ದಾರೆ. ಮುದುಕ ಬಂದು ಮತ ಕೇಳ್ತಿದ್ದಾನೆ ಅಂತ ವ್ಯಂಗ್ಯ ಮಾಡಿದರು. ಅದಕ್ಕೆ ನೀವು ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: BJP 3 ಸಿಲಿಂಡರ್ ಕೊಡ್ತೀನಿ ಅಂದಿದೆ, ನಾನು 5 ಸಿಲಿಂಡರ್ ಕೊಡ್ತೀನಿ – ಹೆಚ್‌ಡಿಕೆ

bjp flag 3

ಬಿಜೆಪಿ (BJP) ಅವರು ಹಿಂದಿನ ಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ. ಕಾಂಗ್ರೆಸ್ ಅವರ ಕೈಯಲ್ಲೂ ಅಭಿವೃದ್ಧಿ ಮಾಡಲು ಆಗಲಿಲ್ಲ. ಕುಮಾರಸ್ವಾಮಿ ಇವತ್ತು ಇಡೀ ರಾಜ್ಯ ಪಂಚರತ್ನ ರಥಯಾತ್ರೆ ಮಾಡಿ ಸುತ್ತುತ್ತಿದ್ದಾರೆ. ಸ್ತ್ರೀ ಶಕ್ತಿ ಸಾಲಮನ್ನಾ ಮಾಡೋ ಏಕೈಕ ವ್ಯಕ್ತಿ ಕುಮಾರಸ್ವಾಮಿ. ನೀವು ನಮ್ಮನ್ನ ಉಳಿಸಿದ್ರಿ, ಪ್ರಧಾನಿ ಮಂತ್ರಿ ಮಾಡಿದ್ರಿ. ಮಂಡ್ಯದಲ್ಲಿ ನಿಖಿಲ್ ಸೋಲಿಸಿ ನೋವು ಕೊಟ್ಟರು. ಈಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ದಯಮಾಡಿ ನಿಖಿಲ್ ನನ್ನು ಗೆಲ್ಲಿಸಿ. ಈ 90ನೇ ವಯಸ್ಸಿನಲ್ಲಿ ನಿಮ್ಮನ್ನು ಕೈಚಾಚಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ರಾಮನಗರ ಜನ ಸಭ್ಯಸ್ಥರು. ನನ್ನನ್ನು ಹರಸಿ, ಗೆಲ್ಲಸಿ ನನ್ನನ್ನು ಪ್ರಧಾನಿ ಮಾಡಿದ್ರಿ. ಹಾಗೆಯೇ ನಿಖಿಲ್ ಅವರನ್ನೂ ಗೆಲ್ಲಿಸಿ ಎಂದು ನಿಖಿಲ್ ಅವರ ಕೈ ಎತ್ತಿ ಗೆಲ್ಲಿಸುವಂತೆ ದೇವೇಗೌಡ್ರು ಕಣ್ಣೀರು ಹಾಕಿ ಮನವಿ ಮಾಡಿದರು.

Share This Article