ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು (RG Kar Medical College) ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರೊಂದಿಗೆ ಮಾತುಕತೆಗಾಗಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರ 5ನೇ ಹಾಗೂ ಕೊನೇ ಬಾರಿ ಆಹ್ವಾನ ನೀಡಿದೆ.
- Advertisement -
ಕಳೆದ ಕೆಲ ದಿನಗಳಿಂದ ಟ್ರೈನಿ ವೈದ್ಯೆ ʻಹತ್ಯಾʼಚಾರ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ (Doctors Protest) ತೊಡಗಿದ್ದಾರೆ. ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಮತ್ತು ಕಿರುಕುಳ ನೀಡುತ್ತಿರುವ ಕೆಲ ಉನ್ನತಾಧಿಕಾರಿಗಳನ್ನ ಕಿತ್ತೊಗೆಯುವವರೆಗೆ ಸೇವೆಗೆ ಸೇರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾಲಿಘಾಟ್ ನಿವಾಸದಲ್ಲಿ ಸೋಮವಾರ (ಸೆ.16) ಸಂಜೆ 5 ಗಂಟೆಗೆ ವೇಳೆಗೆ ಸಭೆಗೆ ಪತ್ರದ ಮೂಲಕ ಆಹ್ವಾನ ನೀಡಲಾಗಿದೆ.
- Advertisement -
- Advertisement -
ಇದು 5ನೇ ಮತ್ತು ಕೊನೇ ಬಾರಿಗೆ ಸಿಎಂ ನಿಮ್ಮನ್ನು ಆಹ್ವಾನಿಸಿದ್ದಾರೆ. ವೈದ್ಯರು ಈಗ ಸಾಮಾನ್ಯ ಸಭೆ ನಡೆಸುತ್ತಿದ್ದಾರೆ. ನಂತರ ಕಿರಿಯ ವೈದ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಸಿಎಂ ಅವರ ಆಪ್ತ ಕಾರ್ಯದರ್ಶಿ ಮನೋಜ್ ಪಂತ್ ವೈದ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಮೂಲದ ಮಾಡೆಲ್‍ಗೆ ಕಿರುಕುಳ – ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್
- Advertisement -
ಸಭೆಯಲ್ಲಿ ಯಾವುದೇ ಲೈವ್ ಸ್ಟ್ರೀಮಿಂಗ್ ಅಥವಾ ವೀಡಿಯೋಗ್ರಫಿ ಮಾಡಲಾಗುವುದಿಲ್ಲ. ಬದಲಿಗೆ ಸಭೆಯ ನಡಾವಳಿಗಳನ್ನು ಎರಡೂ ಪಕ್ಷಗಳು ದಾಖಲಿಸಿ, ಕಡತಕ್ಕೆ ಸಹಿ ಮಾಡಲಿವೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ನಾವು ಎದುರು ನೋಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ವರದಕ್ಷಿಣೆಯಾಗಿ ಬೈಕ್ ಕೇಳಿದ್ದ ಪತಿ – ಕೊಡದಿದ್ದಕ್ಕೆ ತವರು ಮನೆಯಿಂದ ಕರೆತಂದು ಪತ್ನಿಯನ್ನೇ ಕೊಂದ!
ಬಿಜೆಪಿ ತರಾಟೆ:
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಐಟಿ-ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ಮಮತಾ ಬ್ಯಾನರ್ಜಿ ಕಿರಿಯ ವೈದ್ಯರ ಸಭೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕಿರಿಯ ವೈದ್ಯರನ್ನು ಪತ್ರದ ಮೂಲಕ ಸಭೆಗೆ ಆಹ್ವಾನಿಸಿದ್ದು, ಇದು ಬೆರಿಕೆಯಿಂದ ಕೂಡಿದೆ, ಅಲ್ಲದೇ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಕೇಸನ್ನ ಆತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದರು: ಸಿಬಿಐ ರಿಮ್ಯಾಂಡ್ ಕಾಪಿಯಲ್ಲಿ ರಹಸ್ಯ ಸ್ಫೋಟ!