ಕಲಬುರಗಿ: ಪಿಎಸ್‍ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರಿದಿದೆ. ಪ್ರಕರಣದ ಕಿಂಗ್‍ಪಿನ್ ಆರ್.ಡಿ.ಪಾಟೀಲ್ ಅವರನ್ನು ಮತ್ತೆ ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ಪಡೆದುಕೊಂಡಿದೆ.
ಸಿಐಡಿ ಡಿವೈಎಸ್‍ಪಿ ವೀರೇಂದ್ರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಬ್ಲೂಟೂತ್ ಕಿಂಗ್‍ಪಿನ್ ಆರ್.ಡಿ.ಪಾಟೀಲ್ ಅವರನ್ನು ಮೇ 30ರವರೆಗೆ ಕಸ್ಟಡಿಗೆ ಪಡೆದು ಕಲಬುರಗಿ ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು: ಮುತಾಲಿಕ್
Advertisement
Advertisement
ಎಂಎಸ್‍ಐ ಕಾಲೇಜು ಪರೀಕ್ಷಾ ಕೇಂದ್ರ ಅಕ್ರಮ ಕುರಿತಂತೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ತನಿಖೆ ಕೈಗೊಂಡ ಸಿಐಡಿ ತಂಡ ಕಲಬುರಗಿಯ ಸಿಐಡಿ ಕಚೇರಿಯಲ್ಲಿ ಆರ್.ಡಿ.ಪಾಟೀಲ್ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದೆ.
Advertisement
ಪರೀಕ್ಷೆ ಅಕ್ರಮದಲ್ಲಿ ಇನ್ನಷ್ಟು ಅಧಿಕಾರಿಗಳು, ಮಧ್ಯವರ್ತಿಗಳು, ಅಭ್ಯರ್ಥಿಗಳ ಬಂಧನದ ಸಾಧ್ಯತೆ ಇದೆ.