ಬೆಂಗಳೂರು: ಐಪಿಎಲ್ (IPL) ಮ್ಯಾಚ್‌ಗಳ ಟಿಕೆಟ್ ಸಿಕ್ಕರೆ ಅವರೇ ಪುಣ್ಯವಂತರು ಎನ್ನುವ ಹಾಗಾಗಿದೆ. ಯಾಕೆಂದರೆ ಎಷ್ಟೇ ಕಷ್ಟಪಟ್ಟರೂ ಸಹ ಟಿಕೆಟ್‌ಗಳು ಸಿಕ್ತಿಲ್ಲ. ಗುರುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ (Royal Challengers Bengaluru) ಹಾಗೂ ದೆಹಲಿ (Delhi Capitals) ನಡುವಿನ ಪಂದ್ಯದ ಟಿಕೆಟ್‌ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನ (Chinnaswamy Stadium) ಸುತ್ತಮುತ್ತ, ಕಬ್ಬನ್ ಪಾರ್ಕ್ (Cubbon Park) ಒಳಗೆ ಟಿಕೆಟ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಡಿಸಿಪಿ ಅಕಾಯ್ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್, ಮಧ್ಯೆ 11 ಗಂಟೆ ಪಿಟ್ ಸ್ಟಾಪ್!
ಮಫ್ತಿಯಲ್ಲಿ ಟಿಕೆಟ್ ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದರು. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್ – ಐವರು ದುರ್ಮರಣ
ಬ್ಲಾಕ್ ಟಿಕೆಟ್ ಹಿಂದೆ ಯಾರಿದ್ದಾರೆ. ಟಿಕೆಟ್ ಹೇಗೆ ಸಿಕ್ತು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.