ಬೆಂಗಳೂರು: ಐಪಿಎಲ್‌ಗೆ(IPL) ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿ (RCB) ಪರ ಆಡುತ್ತಿರುವ ನ್ಯೂಜಿಲೆಂಡಿನ ಜಾಕೋಬ್ ಡಫಿ (Jacob Duffy) ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದಾರೆ.
ತಾನು ಎಸೆದ ಎರಡನೇ ಓವರಿನ ಮೊದಲ ಎಸೆತದಲ್ಲಿ ಆರಂಭಿಕ ಆಟಗಾರ 7 ರನ್ ಗಳಿಸಿದ ಅಭಿಷೇಕ್ ಶರ್ಮಾ ಅವರನ್ನು ಕ್ಯಾಚ್ ಔಟ್ ಮಾಡಿದರು. ಅದೇ ಓವರಿನ 6ನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರನ್ನು ಕ್ಯಾಚ್ ಔಟ್ ಮಾಡಿದರು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್ ಕೊಹ್ಲಿ!
What a way to announce your arrival in the #TATAIPL! 🔥#RCB fans, how would you rate Jacob Duffy’s fiery debut start in the powerplay? ❤️
Updates ▶️ https://t.co/Eo5z0jh4K4 #KhelBindaas | #RCBvSRH | @RCBTweets pic.twitter.com/83xl62EnDO
— IndianPremierLeague (@IPL) March 28, 2026
ಮೂರನೇ ಓವರಿನ 2ನೇ ಎಸೆತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡಿದರು. ಅಂತಿಮವಾಗಿ 4 ಓವರ್‌ನಲ್ಲಿ 22 ನೀಡಿ ಮೂರು ಅಮೂಲ್ಯವಾದ ವಿಕೆಟ್ ಪಡೆದರು. ಯಾವುದೇ ಬ್ರೇಕ್ ನೀಡದೇ ರಜತ್ ಪಾಟಿದರ್ 4 ಓವರ್ ಕೋಟಾವನ್ನು ಪೂರ್ಣಗೊಳಿಸಲು ಡಫಿ ಅವರಿಗೆ ನೀಡಿದರು.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿದ್ದರು. ಈ ಆಯ್ಕೆ ಸಮರ್ಥಿಸುವಂತೆ ಡಫಿ ಬೌಲಿಂಗ್ ಮಾಡಿ ಆರ್‌ಸಿಬಿಗೆ ಆರಂಭಿಕ ಮುನ್ನಡೆ ತಂದುಕೊಟ್ಟರು.

