ದುಬೈ: ಗ್ಲೇನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್‍ಗೆ ಮಂಕಾದ ರಾಜಸ್ಥಾನ ರಾಯಲ್ಸ್ ತಂಡ ಆರ್ಸಿಬಿಗೆ ಶರಣಾಗಿದೆ. ಬೆಂಗಳೂರು ತಂಡದ ರಾಜಸ್ಥಾನ ವಿರುದ್ಧ 7 ವಿಕೆಟ್ ಭರ್ಜರಿ ಜಯದೊಂದಿಗೆ ಪ್ಲೇ ಆಫ್‍ಗೆ ಬಹುತೇಕ ಸ್ಥಾನ ಪಡೆದುಕೊಂಡಿದೆ.
Advertisement
ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 150 ರನ್‍ಗಳ ಟಾರ್ಗಟ್‍ನ್ನು ಬೆನ್ನುಹತ್ತಿದ ಆರ್ಸಿಬಿ ತಂಡ ಉತ್ತಮ ಆರಂಭವನ್ನು ಪಡೆಯಿತು. ವಿರಾಟ್ ಕೊಹ್ಲಿ 25ರನ್(20 ಎಸೆತ, 4 ಬೌಂಡರಿ) ಮತ್ತು ದೇವದತ್ ಪಡಿಕ್ಕಲ್ 22ರನ್(17 ಎಸೆತ 4 ಬೌಂಡರಿ) ಸಿಡಿಸಿ ಔಟ್ ಆದರು ಬಳಿಕ ಒಂದಾದ ಶ್ರೀಕರ್ ಭರತ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ 3ನೇ ವಿಕೆಟ್ 69ರನ್(55 ಎಸೆತ) ಜೊತೆಯಾಟವಾಡಿತು. ಶ್ರೀಕರ್ ಭರತ್ 44 ರನ್(35 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆದರೆ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ನಡೆಸಿ 50ರನ್(30 ಎಸೆತ, 6 ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಉಳಿದು ತಂಡಕ್ಕೆ ಜಯ ತಂದುಕೊಟ್ಟುರು.
Advertisement
Advertisement
ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್:
ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ತಂಡ ಆರಂಭದಲ್ಲಿ ಉತ್ತಮ ರನ್ ಪೇರಿಸಿತು ಬ್ಯಾಟಿಂಗ್‍ನಲ್ಲಿ ಮಿಂಚಿದ ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ 58ರನ್(37 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಯಶಸ್ವಿ ಜೈಸ್ವಾಲ್ 31ರನ್(22 ಎಸೆತ, 3 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆದರು.
Advertisement
ದಿಢೀರ್ ಕುಸಿತ ಕಂಡ ರಾಜಸ್ಥಾನ:
ರಾಜಸ್ಥಾನ 100ರನ್‍ಗೆ 2 ವಿಕೆಟ್ ಕಳೆದು ಕೊಂಡಿದ್ದ ರಾಜಸ್ಥಾನ ಬಳಿಕ ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. ನಾಯಕ ಸಂಜು ಸ್ಯಾಮ್ಸನ್, ಮನಿಪಾಲ್ ಲೊಮರ್, ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ದಾಳಿಗೆ ವಿಕೆಟ್ ಕೊಟ್ಟು ಹೊರನಡೆದರು. ಕಡೆಯಲ್ಲಿ ಕ್ರಿಸ್ ಮೊರಿಸ್ 14ರನ್(11 ಎಸೆತ, 2 ಬೌಂಡರಿ) ಬಾರಿಸಿ ಮೊತ್ತ ಏರಿಸಿದರು. ಅಂತಿಮವಾಗಿ 20 ಓವರ್ ಗಳ ಅಂತ್ಯಕ್ಕೆ ರಾಜಸ್ಥಾನ ತಂಡ 9 ವಿಕೆಟ್ ಕಳೆದುಕೊಂಡು 149ರನ್ ಪೇರಿಸಿತು.
ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತು ಮಿಂಚಿದರೆ, ಯಜುವೇಂದ್ರ ಚಹಲ್, ಶಹಬಾಜ್ ಅಹಮದ್ ತಲಾ 2 ವಿಕೆಟ್ ಪಡೆದರು. ಜಾರ್ಜ್ ಗಾರ್ಟನ್ 1 ವಿಕೆಟ್ ತನ್ನದಾಗಿಸಿಕೊಂಡರು.