ಮಾರ್ಚ್‌ನಲ್ಲಿ ಸ್ಕ್ರಿಪ್ಟ್‌ ಬರೆದು ಜೂನ್‌ನಲ್ಲಿ ‘ಪಿಕ್ಚರ್‌’ ತೆಗೆದ ಜಿತೇಶ್‌ ಶರ್ಮಾ!

Public TV
1 Min Read
Virat On Left DK On Right Jitesh Sharma dressing room Notes

ಅಹಮದಾಬಾದ್‌: ಐಪಿಎಲ್‌ (IPL) ಆರಂಭವಾಗುವಾಗ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಬರೆದ ಸ್ಕ್ರಿಪ್ಟ್‌ನಂತೆ ಜಿತೇಶ್‌ ಶರ್ಮಾ (Jitesh Sharma) ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಮಾರ್ಚ್‌ನಲ್ಲಿ ಐಪಿಎಲ್‌ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಜಿತೇಶ್‌ ಶರ್ಮಾ ಡ್ರೆಸ್ಸಿಂಗ್‌ ಕೊಠಡಿಯಲ್ಲಿ, ಫೈನಲ್‌ನಲ್ಲಿ ಕೊನೆಯ 2 ಎಸೆತಗಳಲ್ಲಿ ಗೆಲುವಿಗೆ 6 ರನ್‌ ಬೇಕಿದ್ದಾಗ ನಾನು ಸಿಕ್ಸ್‌ ಹೊಡೆದು ಜಯ ತಂದುಕೊಡಬೇಕು. ನಾನು ಕಪ್‌ ಹಿಡಿದುಕೊಂಡಿರಬೇಕು. ನನ್ನ ಎಡ ಭಾಗದಲ್ಲಿ ವಿರಾಟ್‌ ಕೊಹ್ಲಿ (Virat Kohli) ಇದ್ದರೆ ಪಕ್ಕದಲ್ಲಿ ದಿನೇಶ್‌ ಕಾರ್ತಿಕ್‌ (Dinesh Karthik) ಇರಬೇಕು. 2025-26ರ ಋತುವಿನಲ್ಲಿ ಇದು ನಿಜವಾಗಲಿ ಎಂದು ಆಶಿಸಿದ್ದರು.

RCB vs PBKS IPL Final Virat On Left DK On Right Jitesh Sharma dressing room Notes Down Power of Manifestation

ಜಿತೇಶ್‌ ಶರ್ಮಾ ಸಿಕ್ಸ್‌ ಹೊಡೆಯದಿದ್ದರೂ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಕನಸು ನನಸಾದ ಕಾರಣ ಈಗ ಕೊಹ್ಲಿ, ದಿನೇಶ್‌ ಕಾರ್ತಿಕ್‌ ಜೊತೆ ಕಪ್‌ ಹಿಡಿದುಕೊಂಡು ಜಿತೇಶ್‌ ಶರ್ಮಾ ಫೋಟೋ ತೆಗೆದುಕೊಂಡಿದ್ದಾರೆ.

ವಿಕೆಟ್‌ ಕೀಪರ್‌ ಆಗಿರುವ ಜಿತೇಶ್‌ ಶರ್ಮಾ ಈ ಐಪಿಎಲ್‌ನ 15 ಪಂದ್ಯಗಳಿಂದ 261 ರನ್‌ ಹೊಡೆದಿದ್ದಾರೆ. ಫೈನಲ್‌ನಲ್ಲಿ 10 ಎಸೆತಗಳಲ್ಲಿ 24 ರನ್‌ ಹೊಡೆದಿದ್ದರು. ಅದರಲ್ಲೂ ಲಕ್ನೋ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ 85 ರನ್‌(8 ಬೌಂಡರಿ, 6 ಸಿಕ್ಸ್‌) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

Share This Article