ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮಂಕಡ್ ರನ್ ಔಟ್ ಆಗುವ ಭೀತಿಗೆ ಒಳಗಾಗಿದ್ದರು.
ಆಗಿದ್ದು ಇಷ್ಟು, 18ನೇ ಓವರನ್ನು ಸ್ಪಿನ್ನರ್ ಸುನೀಲ್ ನರೈನ್ ಎಸೆಯುತ್ತಿದ್ದರು. ಕೊನೆಯ ಎಸೆತವನ್ನು ಹಾಕಲು ಬಂದ ನರೈನ್ ಬಾಲ್ ಹಾಕದೇ ಮುಂದಕ್ಕೆ ಹೋಗಿ ಮಂಕಡ್ ರನೌಟ್ ಮಾಡಲು ಪ್ರಯತ್ನಿಸಿದ್ದರು. ನರೈನ್ ಕೈಯಿಂದ ಬಾಲ್ ಬೀಳದನ್ನು ನೋಡಿದ ಕೂಡಲೇ ಕೊಹ್ಲಿ ಅಲರ್ಟ್ ಆಗಿ ಕ್ರೀಸ್‍ನಲ್ಲೇ ಬ್ಯಾಟ್ ಇಟ್ಟು ಕುಳಿತುಬಿಟ್ಟಿದ್ದಾರೆ. ನಂತರ ನರೈನ್ ಅವರನ್ನು ನೋಡಿ ನಕ್ಕಿದ್ದಾರೆ.
ಈ ಪಂದ್ಯವನ್ನು ಬೆಂಗಳೂರು 10 ರನ್‍ಗಳಿಂದ ಗೆದ್ದುಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 214 ರನ್‍ಗಳ ಗುರಿಯನ್ನು ನೀಡಿತ್ತು. ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 100 ರನ್( 58 ಎಸೆತ, 9 ಬೌಂಡರಿ, 4 ಸಿಕ್ಸರ್) ಹೊಡೆದು ಐಪಿಎಲ್‍ನಲ್ಲಿ 5ನೇ ಶತಕ ಸಿಡಿಸಿದರು.
ವಿರಾಟ್ ಕೊಹ್ಲಿ ಹೊರತಾಗಿ ಮೋಯಿನ್ ಅಲಿ 66 ರನ್(28 ಎಸೆತ, 5 ಬೌಂಡರಿ, 6 ಸಿಕ್ಸರ್) ಸಿಡಿಸಿದರ ಪರಿಣಾಮ ಬೆಂಗಳೂರು ತಂಡ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.
ಕಠಿಣ ಸವಾಲವನ್ನು ಬೆನ್ನೆಟ್ಟಿದ ಕೋಲ್ಕತ್ತಾ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ನಿತೀಶ್ ರಾಣಾ ಔಟಾಗದೇ 85 ರನ್(46 ಎಸೆತ, 9 ಬೌಂಡರಿ, 5 ಸಿಕ್ಸರ್), ರಸೆಲ್ 65 ರನ್(25 ಎಸೆತ, 2 ಬೌಂಡರಿ, 9 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು.
WATCH: Mankading me? NO, says Virat ⚡️⚡️
Full video here ????️https://t.co/Wuymbz3Tke #KKRvRCB pic.twitter.com/5j1DDvmyTJ
— IndianPremierLeague (@IPL) April 19, 2019