ಬೆಂಗಳೂರು: ಆರ್‌ಸಿಬಿ (RCB) ವಿರುದ್ಧ ಗೆದ್ದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul) ಉಗ್ರಂ ಶೈಲಿಯಲ್ಲಿ ವೃತ್ತ ಬರೆದು ಸಂಭ್ರಮಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯ ಮುಗಿದ ಬಳಿಕ ರಾಹುಲ್ ಪಿಚ್ ಬಳಿ ಉಗ್ರಂ ಸಿನಿಮಾದ ದೃಶ್ಯದಂತೆ ಬ್ಯಾಟ್ ಅನ್ನು ನೆಲಕ್ಕೆ ಗುದ್ದಿ “ಇದು ನನ್ನ ಮನೆ” ಎಂಬಂತೆ ಸನ್ನೆ ಮಾಡಿದರು. ಇದನ್ನೂ ಓದಿ: ತವರಲ್ಲಿ ಮತ್ತೆ ಸೋತ ಆರ್‌ಸಿಬಿ – ಕೆ.ಎಲ್.ರಾಹುಲ್ ಮಿಂಚು; ಡೆಲ್ಲಿಗೆ 6 ವಿಕೆಟ್‌ಗಳ ಜಯ
KL Rahul responded to #RCB management in the Ugram Style!
It is my territory.#RCBvDC #KLRahulpic.twitter.com/0qLmjFwGbP
— The Bengaluru Dialogue🧢 (@Rashmi_Voice) April 11, 2025
ಪಂದ್ಯಶ್ರೇಷ್ಠ ಗೌರಕ್ಕೆ ಪಾತ್ರರಾದ ರಾಹುಲ್, ಬೆಂಗಳೂರು (Bengaluru) ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ತಿಳಿದಿದೆ ಎಂದು ತಿಳಿಸಿದರು. ಈ ಡೈಲಾಗ್ ಹೊಡೆಯುವ ಮೂಲಕ ಹರಾಜಿನಲ್ಲಿ ತನ್ನನ್ನು ಪರಿಗಣಿಸದ ಆರ್‌ಸಿಬಿಗೆ ಟಾಂಗ್ ನೀಡಿದರು. ಇದನ್ನೂ ಓದಿ: RCBvsDC | ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟ – 8 ಮಂದಿ ಸಿಸಿಬಿ ಬಲೆಗೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 163 ರನ್ ಹೊಡೆಯಿತು. ಇದಕ್ಕೆ ಉತ್ತರ ನೀಡಿದ ಡೆಲ್ಲಿ ಕೆಎಲ್ ರಾಹುಲ್ ಅವರ ಅತ್ಯುತ್ತಮ ಆಟದಿಂದ 17.5 ಓವರ್‌ಗಳಲ್ಲಿ 169 ರನ್ ಹೊಡೆದು ಜಯಗಳಿಸಿತು.
ರಾಹುಲ್ ಔಟಾಗದೇ 93 ರನ್ (53 ಎಸೆತ, 7 ಬೌಂಡರಿ, 6 ಸಿಕ್ಸ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.