ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಹೊರಗಡೆ ಐಪಿಎಲ್ (IPL) ಟಿಕೆಟ್‍ಗೆ ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಸೋಮವಾರ ನಡೆಯಲಿರುವ ಆರ್‌ಸಿಬಿ (RCB) ಹಾಗೂ ಚೆನ್ನೈ ಹೈವೋಲ್ಟೇಜ್ (CSK) ಐಪಿಎಲ್ ಮ್ಯಾಚ್ ವೀಕ್ಷಿಸಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: IPLಗೆ ಸೆಡ್ಡು ಹೊಡೆಯಲು ಸೌದಿ ಮಾಸ್ಟರ್ ಪ್ಲ್ಯಾನ್ – BCCI ಹೇಳಿದ್ದೇನು?
ಟಿಕೆಟ್ ಕೆಲವೇ ಕ್ಷಣದಲ್ಲಿ ಖಾಲಿಯಾಗಿದ್ದಕ್ಕೆ ಕ್ರೀಡಾಂಗಣದ ಟಿಕೆಟ್ ಕೌಂಟರ್‍ಗೆ ಸೋಲ್ಡ್ ಔಟ್ ಬೋರ್ಡ್ ಹಾಕಲಾಗಿತ್ತು. ಈ ಬೋರ್ಡ್ ನೋಡಿದ ಅಭಿಮಾನಿಗಳು ಸೋಲ್ಡ್ ಔಟ್ ಬೋರ್ಡ್‍ನ್ನು ಕಿತ್ತು ಹಾಕಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ತೀವ್ರ ಕಸರತ್ತು ನಡೆಸಿದ್ದು ನಿಯಂತ್ರಣಕ್ಕಾಗಿ ಲಾಠಿ ಬೀಸಿದ್ದಾರೆ.
ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ತಂಡಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಕಾರಣಕ್ಕೆ ಟಿಕೆಟ್ ಬೇಗನೇ ಮಾರಾಟವಾಗಿದೆ.
ಶನಿವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ( Delhi Capitals) ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ 23 ರನ್‍ಗಳ ಗೆಲುವು ಸಾಧಿಸಿತ್ತು. ಈ ಮೂಲಕ ಡೆಲ್ಲಿಯನ್ನು ಸತತ ಐದನೇ ಸೋಲಿನತ್ತ ನೂಕಿತು. ಈ ಟೂರ್ನಿಯಲ್ಲಿ ವಿರಾಟ್ ಕೋಹ್ಲಿ ಮೂರನೇ ಅರ್ಧ ಶತಕ ಸಿಡಿಸಿದ್ದರು.
ಬೆಂಗಳೂರು (Bengaluru) ಮತ್ತು ಚೆನ್ನೈ ತಲಾ 4 ಪಂದ್ಯವನ್ನು ಆಡಿದ್ದು ಎರಡೂ ತಂಡಗಳು ಎರಡು ಜಯ ದಾಖಲಿಸಿದೆ. ಚೆನ್ನೈ ತಂಡದ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ ಬೆಂಗಳೂರು 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: IPL 2023: ಕೊನೆಯಲ್ಲಿ ಸಿಕ್ಸರ್, ಬೌಂಡರಿ ಆಟ – ಲಕ್ನೋ ತವರಿನಲ್ಲಿ ಗೆದ್ದು ಬೀಗಿದ ಪಂಜಾಬ್