– ರಾಯಲ್ ಚಾಲೆಂಜರ್ಸ್ ಹೆಸರಲ್ಲಿರೋ ಟಾಪ್ ದಾಖಲೆಗಳಿವು
ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ (IPL 2024) ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್ ಇದೆ. 16 ಆವೃತ್ತಿ ಕಳೆದರೂ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳನ್ನೇ ಹೊಂದಿದೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ.
Advertisement
ಅದರಂತೆ ಆರ್‌ಸಿಬಿ ತಂಡ ಕೂಡ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಐಪಿಎಲ್‌ನ ಸಾರ್ವಕಾಲಿಕ ಟಾಪ್ ದಾಖಲೆಗಳನ್ನು ತನ್ನ ಹೆಸರಿನಲ್ಲೇ ಇರಿಸಿಕೊಂಡಿದೆ. ಇದು ಅಭಿಮಾನಿಗಳಿಗೂ ಎಲ್ಲಿಲ್ಲದ ಹೆಗ್ಗಳಿಕೆ. ಅದೇನು ಅಂತೀರಾ ಮುಂದೆ ಓದಿ…
Advertisement
ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಖ್ಯಾತಿ:
2013ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 263 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಇನ್ನಿಂಗ್ಸ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಈವರೆಗೆ ಈ ದಾಖಲೆಯನ್ನು ಯಾವ ತಂಡವೂ ಮುರಿಯಲಾಗಿಲ್ಲ. 2023ರ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಿಂಗ್ಸ್ ಪಂಜಾಬ್ ವಿರುದ್ಧ 5 ವಿಕೆಟ್‌ಗೆ 257 ರನ್ ಗಳಿಸಿದ್ದು, ತಂಡವೊಂದರ 2ನೇ ಗರಿಷ್ಠ ಸ್ಕೋರ್ ಆಗಿದೆ. ಇದನ್ನೂ ಓದಿ: WPL 2024: ಅಂಪೈರ್ ಎಡವಟ್ಟು – ಫಿಕ್ಸಿಂಗ್ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್
Advertisement
Advertisement
ಗೇಲ್ ಸಾರ್ವಕಾಲಿಕ ದಾಖಲೆ:
2013ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ 263 ರನ್ ಬಾರಿಸಿತ್ತು. ಇದೇ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಕೇವಲ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. 265.15 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ಗೇಲ್ ಬರೋಬ್ಬರಿ 17 ಸಿಕ್ಸರ್, 13 ಬೌಂಡರಿಗಳನ್ನ ಚಚ್ಚಿದ್ದರು. ಇದು ಸಹ ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಇದನ್ನೂ ಓದಿ: RCB – CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಸೋಮವಾರದಿಂದಲೇ ಟಿಕೆಟ್ ಮಾರಾಟ ಶುರು, ದರ ಎಷ್ಟು?
ಸರಣಿ ಶ್ರೇಷ್ಠ ಕೊಹ್ಲಿಯ ಸಾರ್ವಕಾಲಿಕ ದಾಖಲೆ ಏನು?
ಇಂಡಿಯನ್ ಪ್ರೀಮಿಯರ್ ಲೀಗ್ 16 ಆವೃತ್ತಿಗಳಿಂದಲೂ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್ ಕೊಹ್ಲಿ (Virat Kohli) ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿರುವ ಟಾಪ್ ದಾಖಲೆಯನ್ನು ಸಾರ್ವಕಾಲಿಕವಾಗಿ ಉಳಿಸಿಕೊಂಡಿದ್ದಾರೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. 152.03 ಸ್ಟ್ರೈಕ್‌ರೇಟ್‌ನಲ್ಲಿ ಬರೋಬ್ಬರಿ 4 ಶತಕ, 7 ಅರ್ಧಶತಕ ಸೇರಿದಂತೆ 973 ರನ್ ಬಾರಿಸಿದ್ದರು. ಇದರಲ್ಲಿ 38 ಸಿಕ್ಸರ್, 83 ಬೌಂಡರಿಗಳೂ ಸೇರಿದ್ದವು. ಇದೂ ಐಪಿಎಲ್ ಇತಿಹಾಸದ ಸಾರ್ವಕಾಲಿಕ ದಾಖಲೆಯಾಗಿದೆ. ಕೊಹ್ಲಿ ಹೊರತುಪಡಿಸಿದರೆ, 890 ರನ್ ಗಳಿಸಿರುವ ಶುಭಮನ್ ಗಿಲ್, 863 ರನ್ ಗಳಿಸಿರುವ ಜೋಶ್ ಬಟ್ಲರ್, 848 ರನ್ ಗಳಿಸಿರುವ ಡೇವಿಡ್ ವಾರ್ನರ್ ಹಾಗೂ 735 ರನ್ ಗಳಿಸಿರುವ ಕೇನ್ ವಿಲಿಯಮ್ಸನ್ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿ ಇದ್ದಾರೆ. ಇದನ್ನೂ ಓದಿ: ಐಪಿಎಲ್ ಸಂಪೂರ್ಣ ಲೀಗ್ ಭಾರತದಲ್ಲೇ ನಡೆಯುತ್ತೆ – ಜಯ್ ಶಾ ಸ್ಪಷ್ಟನೆ
ಟಾಪ್ ರನ್ನರ್‌ನಲ್ಲೂ ಕೊಹ್ಲಿಯೇ ಕಿಂಗ್:
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿರುವ ಟಾಪ್ ರನ್ನರ್‌ಗಳ ಪೈಕಿ ಕೊಹ್ಲಿಯೇ ನಂ.1 ಆಗಿದ್ದಾರೆ. ಆರ್‌ಸಿಬಿ ಪರ 237 ಪಂದ್ಯ, 229 ಇನ್ನಿಂಗ್ಸ್‌ಗಳನ್ನಾಡಿರುವ ಕೊಹ್ಲಿ 7,263 ರನ್ ಗಳಿಸಿದ್ದಾರೆ. ವೈಯಕ್ತಿಕ ಗರಿಷ್ಠ ಸ್ಕೋರ್ 113 ಆಗಿದ್ದು, 7 ಶತಕಗಳು ಹಾಗೂ 50 ಅರ್ಧಶತಕಗಳು, 234 ಸಿಕ್ಸರ್, 643 ಬೌಂಡರಿಗಳೂ ಇದರಲ್ಲಿ ಸೇರಿವೆ. ಅಲ್ಲದೇ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಶತಕ ಸಿಡಿಸಿದ ಖ್ಯಾತಿಯೂ ಕೊಹ್ಲಿ ಹೆಸರಿನಲ್ಲಿಯೇ ಇದೆ. ಇದರ ಖ್ಯಾತಿಯೂ ಆರ್‌ಸಿಬಿ ತಂಡಕ್ಕೆ ಸಲ್ಲುತ್ತದೆ. 6,617 ರನ್ ಗಳಿಸಿರುವ ಶಿಖರ್ ಧವನ್, 6,397 ರನ್ ಗಳಿಸಿರುವ ಡೇವಿಡ್ ವಾರ್ನರ್, 6,211 ರನ್ ಗಳಿಸಿರುವ ರೋಹಿತ್ ಶರ್ಮಾ, 5,528 ರನ್ ಗಳಿಸಿರುವ ಸುರೇಶ್ ರೈನಾ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿ ಇದ್ದಾರೆ.