Bengaluru City
ಬಿಎಂಟಿಸಿ ಬಸ್‍ನಲ್ಲಿ ಸ್ಟೇಡಿಯಂಗೆ ಆಗಮಿಸಿದ ಆರ್‍ಸಿಬಿ ಆಟಗಾರರು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನ ಭಾನುವಾರದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ಖಾಸಗಿ ಹೋಟೆಲ್ ನಿಂದ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿ ಚಿನ್ನಸ್ವಾಮಿ ಸ್ಟೇಡಿಯಂ ಆಗಮಿಸಿದ್ದು ವಿಶೇಷವಾಗಿತ್ತು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸುವಂತೆ ಜನರಿಗೆ ತಿಳಿಸುವುದು ಮತ್ತು ದಿನೇ ದಿನೇ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನ ಅದಷ್ಟು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸುವ ಉದ್ದೇಶದಿಂದ ಇವತ್ತು ನಮ್ಮ ಬಸ್ ನಲ್ಲಿ ಆಟಗಾರರು ಪ್ರಯಾಣಿಸಿದರು ಎಂದು ಬಿಎಂಟಿಸಿಯ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದರು.
ಗ್ರೀನ್ ಜರ್ಸಿ: ಇವತ್ತಿನ ಪಂದ್ಯದಲ್ಲಿ ಆರ್‍ಸಿಬಿ ಬಾಯ್ಸ್ ಗ್ರೀನ್ ಜರ್ಸಿ ಹಾಕಿ ಆಡುತ್ತಿದ್ದಾರೆ. ಪ್ರಕೃತಿ ಉಳಿಸಿ ಗಿಡ ಮರಗಳನ್ನ ಬೆಳೆಸಿ ಎನ್ನುವ ಸಂದೇಶ ಸಾರುವ ಉದ್ದೇಶದಿಂದ ಆರ್‍ಸಿಬಿ ಬಾಯ್ಸ್ ಈ ಗ್ರೀನ್ ಜರ್ಸಿಯನ್ನು ತೊಟ್ಟಿದ್ದಾರೆ.
