ಚಿಕ್ಕಬಳ್ಳಾಪುರ: ‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ಕೊನೆಗೂ ಗುಡ್ ನ್ಯೂಸ್ ಕೊಟ್ಟಿದೆ. ಐಪಿಎಲ್ ಪ್ಲೇ ಆಫ್ ಗೆ ಆರ್ ಸಿಬಿ ಕ್ವಾಲಿಫೈ ಆಗಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಈ ನಡುವೆ ಅಭಿಮಾನಿಯೊಬ್ಬ ಮ್ಯಾಚ್‍ಗೂ ಮುನ್ನ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸುವ ಮೂಲಕ ಇದೀಗ ಸುದ್ದಿಯಾಗಿದ್ದಾನೆ.
ಆರ್ ಸಿಬಿ ಅಭಿಮಾನಿ ಅಂಬರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಸ್ವಾಮಿಗೆ ಆರ್ ಸಿಬಿ ಗೆದ್ರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಇದೀಗ 101 ಈಡುಗಾಯಿ ಒಡೆದು ಹರಕೆ ತೀರಿಸಿದ್ದಾರೆ. ಕೇವಲ ಅಂಬರೀಶ್ ಮಾತ್ರವಲ್ಲ ಆರ್ ಸಿಬಿಯ ಇತರೆ ಅಭಿಮಾನಿಗಳು ಕೂಡ ತೆಂಗಿನಕಾಯಿ ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಆರ್ ಸಿಬಿ ಗೆದ್ದು ಬೀಗಿದೆ. 20ನೇ ಓವರ್ 5ನೇ ಎಸೆತದಲ್ಲೇ ಆರ್ ಸಿಬಿಗೆ (RCB) ಗೆಲುವು ಖಚಿತವಾಗುತ್ತಿದಂತೆ ಅಭಿಮಾನಿಗಳ ಸಂತಸ ಇಮ್ಮಡಿಯಾಯ್ತು. ಕೆಲವರು ಅಲ್ಲಲ್ಲಿ ಕೇಕ್ ಮಾಡಿ ಸಂಭ್ರಮಿಸಿದರೆ, ಇನ್ನೂ ಕೆಲವರು ರಸ್ತೆಯಲ್ಲಿ ಬಾವುಟ ಹಿಡಿದು ಕುಣಿದಾಡಿದ್ದಾರೆ. ಇದನ್ನೂ ಓದಿ: ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ; ಬೆಂಗ್ಳೂರಲ್ಲಿ ಅಭಿಮಾನಿಗಳ ಜಾತ್ರೆ – ಫ್ಯಾನ್ಸ್ ನೋಡಿ ವಿರಾಟ್ ಖುಷ್