18 ರನ್, 18.1 ಓವರ್, ಕೊಹ್ಲಿ ಜೆರ್ಸಿ ನಂ.18 – ಮೇ 18ರಂದು ಸೋಲೇ ಕಾಣದ ಆರ್‌ಸಿಬಿಗೆ ಅಗ್ನಿಪರೀಕ್ಷೆ!

Public TV
2 Min Read
18 2

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ನಡುವಿನ ಮಹಾಕಾಳಗಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶನಿವಾರ (ಮೇ 18) ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

2024ರ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ (IPL Playoffs) ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ವಿಶೇಷವೆಂದರೆ ನಂ.18 ಜೆರ್ಸಿ ಹೊಂದಿರುವ ಕಿಂಗ್‌ ಕೊಹ್ಲಿ ಅವರಿಗೂ ಇದು ಸವಾಲಿನದ್ದಾಗಿದೆ. ಮೇ 18ರಂದು ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದರೆ 18 ರನ್‌ಗಳ ಅಂತರದಿಂದ ಗೆಲ್ಲಬೇಕು, ಚೇಸಿಂಗ್‌ ಮಾಡಿದರೆ 18.1 ಓವರ್‌ಗಳಲ್ಲಿ ಗೆಲುವು ಸಾಧಿಸಬೇಕು. ಇದನ್ನೂ ಓದಿ: RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

RCB vs CSK 1

ಆರ್‌ಸಿಬಿಗೆ ಅಗ್ನಿ ಪರೀಕ್ಷೆ:
ಹಿಂದಿನ ವರ್ಷಗಳಲ್ಲಿ ಮೇ 18ರಂದು ನಡೆದ ಪಂದ್ಯಗಳಲ್ಲಿ ಸಿಎಸ್‌ಕೆ ವಿರುದ್ಧವೇ ಆರ್‌ಸಿಬಿ ಎರಡು ಬಾರಿ ಗೆದ್ದಿರುವ ಉದಾಹರಣೆಯಿದೆ. 2013 ಮತ್ತು 2014ರ ಮೇ 18ರಂದು ಸಹ ಆರ್‌ಸಿಬಿ ಚೆನ್ನೈ ವಿರುದ್ಧ ಗೆದ್ದು ಬೀಗಿತ್ತು. 2016ರ ಮೇ 18ರಂದು ಕಿಂಗ್ಸ್‌ ಪಜಾಬ್‌ ವಿರುದ್ಧ, 2023ರ ಮೇ 18ರಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. ಹಾಗಾಗಿ ಈ ಬಾರಿಯೂ ಆರ್‌ಸಿಬಿ ಗೆಲ್ಲುವ ಉತ್ಸಾಹದಲ್ಲೇ ಇದೆ. ಮಳೆ ಬಿಡುವು ಕೊಟ್ಟರೆ ಆರ್‌ಸಿಬಿ ಗೆಲುವಿನ ಕನಸು ಈಡೇರುವ ಸಾಧ್ಯೆಯಿದೆ. ಮಳೆಯಿಂದ ಪಂದ್ಯ ರದ್ದಾದರೆ ಆರ್‌ಸಿಬಿ ಒಂದು ಅಂಕದೊಂದಿಗೆ ಪ್ಲೇ ಆಫ್‌ ನಿಂದ ಹೊರಗುಳಿಯಲಿದೆ. ಇದನ್ನೂ ಓದಿ: ಈ ಸಾಧನೆ ಮಾಡಿಲ್ಲ ಅಂತ ನಾಳೆದಿನ ಚಿಂತಿಸಬಾರದು – ನಿವೃತ್ತಿ ಬಗ್ಗೆ ಸುಳಿವು ಕೊಟ್ರಾ ಕಿಂಗ್‌ ಕೊಹ್ಲಿ?

Chinnaswamy Stadium

ʻಸಬ್‌ ಏರ್‌ ಸಿಸ್ಟಮ್‌ʼ ಒಂದೇ ಆಧಾರ?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆಯು 9 ಗಂಟೆ ವೇಳೆಗೆ ಬಿಡುವು ಕೊಟ್ಟರೂ 9:30 ರಿಂದ ಕನಿಷ್ಠ 15 ಓವರ್‌ಗಳ ಪಂದ್ಯ ನಡೆಸಬಹುದಾಗಿದೆ. ಒಂದು ವೇಳೆ 10:30 ರಿಂದ ಪಂದ್ಯ ಆರಂಭಿಸಿದರೆ 10 ಓವರ್‌ ಅಥವಾ 5 ಓವರ್‌ಗಳ ಪಂದ್ಯ ನಡೆಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

Share This Article