ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ವಹಣಾ ನಿರ್ದೇಶಕ ಮೈಕ್ ಹೆಸ್ಸನ್ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೊರೊನಾ ಕಾರಣದಿಂದ ಭಾರತದಲ್ಲಿ ಲಾಕ್‍ಡೌನ್ ವಿಧಿಸಲಾಗಿದೆ. ಐಪಿಎಲ್ ಲೀಗ್ ಟೂರ್ನಿಯಲ್ಲಿ ಭಾಗಿಯಾಗಲು ನ್ಯೂಜಿಲೆಂಡ್‍ನ ಮಾಜಿ ಕೋಚ್ ಮೈಕ್ ಹೆಸ್ಸನ್ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಲಾಕ್‍ಡೌನ್ ಘೋಷಣೆಯಾದ ಕಾರಣ ಭಾರತದಲ್ಲೇ ಉಳಿದುಕೊಂಡಿದ್ದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಭಾರತದಲ್ಲಿ ಲಾಕ್‍ಡೌನ್ ಕಾರಣಕ್ಕೆ ದೇಶದಲ್ಲಿ ಸಿಲುಕಿದ್ದ ವಿದೇಶಿಗರಿಗೆ ತಮ್ಮ ಸ್ವದೇಶಕ್ಕೆ ಮರಳುವ ಅವಕಾಶ ನೀಡಿತ್ತು. ಮೈಕ್ ಹೆಸ್ಸನ್ ಅವರು ಕೂಡ ಇದೇ ಸಾಲಿನಲ್ಲಿ ಒಂದು ತಿಂಗಳ ಬಳಿಕ ಸ್ವದೇಶಕ್ಕೆ ಮರಳಿದ್ದರು.
Advertisement
What a wonderful sight ✈️ after spending over a day on a bus ???? to get to Mumbai airport. The staff on @FlyAirNZ were simply outstanding on our return to New Zealand ????????????
.
Special thanks to ????@NZinIndia @MFATNZ @narendramodi @jacindaardern #repatriationflight #india #NZ
???????? pic.twitter.com/1Qq6xrcotu
— Mike Hesson (@CoachHesson) April 27, 2020
Advertisement
ಬಹಳ ಸಮಯದ ಬಳಿಕ ಮನೆಗೆ ತೆರಳಿದ್ದ ಮೈಕ್ ಹೆಸ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊರೊನಾದಂತಹ ಕಷ್ಟದ ಸನ್ನಿವೇಶದಲ್ಲಿ ತಮ್ಮನ್ನು ಸ್ವದೇಶಕ್ಕೆ ಕಳುಹಿಸಿದ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ಕೊರೊನಾ ಕಾರಣದಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಖ್ಯಾತಿ ಪಡೆದಿರುವ ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾ ಟೂರ್ನಿಗಳನ್ನು ಮುಂದೂಡಲಾಗಿದೆ. ಕೊರೊನಾ ಸ್ಥಿತಿ ಇನ್ನು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲ ಟೂರ್ನಿಗಳು ಆರಂಭವಾಗುವುದು ಅನುಮಾನ ಎನ್ನಲಾಗಿದೆ.