ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

Public TV
2 Min Read
yajuvendra chahal 2

– ಕನ್ನಡಿಗರ ಮನ ಗೆದ್ದ ಆರ್‌ಸಿಬಿ ತಂಡದ ಸ್ಪಿನ್ನರ್

ಬೆಂಗಳೂರು: ಕ್ರಿಕೆಟ್ ಹಬ್ಬವೆಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗರ ಮನ ಗೆಲ್ಲಲು ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಬಳಸುತ್ತಿದೆ. ಇದೇ ಮಾದರಿಯಲ್ಲೇ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರ ಮನ ಗೆದ್ದಿದಾರೆ.

ತಾವು ಬೌಲಿಂಗ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಚಹಲ್, ‘ನಮ್ಮ ಬೆಂಗಳೂರು ಕುಟುಂಬ ರೆಡಿನಾ’ ಎಂದು ಬರೆದುಕೊಂಡಿದ್ದಾರೆ. ಚಹಲ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ‘ಫಿದಾ ಆಗೋದೇ ಗುರು ನಮ್ಮ ಕನ್ನಡ ಟ್ವಿಟ್ ನೋಡಿ. ಬೇರೆ ರಾಜ್ಯದವರು ನಮ್ಮ ಕನ್ನಡ ಪದಬಳಕೆ ಮಾಡಿದಾಗ ಅದರಲ್ಲಿ ಸಿಗುವ ಮಜಾನೇ ಬೇರೆ. ಲವ್ ಯೂ ಬ್ರೋ. ಜೈ ಆರ್‌ಸಿಬಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಈ ಬೆನ್ನಲ್ಲೇ ಆರ್‌ಸಿಬಿ ತಂಡವು ಅಭ್ಯಾಸಕ್ಕೆ ಸಿದ್ಧತೆ ನಡೆಸಿದೆ. ಹೀಗಾಗಿ ಚಹಾಲ್ ನಮ್ಮ ಬೆಂಗಳೂರು ಕುಟುಂಬ ರೆಡಿನಾ ಎಂದು ಕೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

ಇಲ್ಲಿವರೆಗೆ ಐಪಿಎಲ್ 12 ಆವೃತ್ತಿಗಳು ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಚಾಂಪಿಯನ್‍ಶಿಪ್ ಆಗಿದೆ. ಆದರೆ ಮೂರು ತಂಡಗಳು ಇಲ್ಲಿವರೆಗೂ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕಪ್ ಗೆಲ್ಲದೆ ಇರುವ ತಂಡಗಳಾಗಿದೆ.

2019ರ ಐಪಿಎಲ್ ಆವೃತ್ತಿಯಲ್ಲಿ ಗೆಲ್ಲುವ ಮೂಲಕ ಮುಂಬೈ ನಾಲ್ಕನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡ ತಂಡವಾಗಿ ಹೊರ ಹೊಮ್ಮಿತು. ಈ ಮೂಲಕ ಐಪಿಎಲ್ ಸೀಸನ್‍ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡವಾಗಿ ಮುಂಬೈ ಇಂಡಿಯನ್ಸ್ ಗುರುತಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಚೊಚ್ಚಲ ಸೀಸನ್ 2008ರಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 3, ಕೋಲ್ಕತ್ತಾ ನೈಟ್‍ರೈಡರ್ಸ್ 2 ಹಾಗೂ ಸನ್‍ರೈಸರ್ಸ್ ಹೈದರಾಬಾದ್ ಒಂದು ಬಾರಿ ಟ್ರೋಫಿ ಗೆದ್ದುಕೊಂಡಿದೆ. ಇದನ್ನೂ ಓದಿ: ಐಪಿಎಲ್ ನಗದು ಬಹುಮಾನದಲ್ಲಿ ಶೇ.50ರಷ್ಟು ಕಡಿತ- ಬಿಸಿಸಿಐ ಹೇಳಿದ್ದೇನು?

RCB

ಕಳೆದ ಆವೃತ್ತಿಯಲ್ಲಿ ಕೇಳಿ ಬಂದ ‘ಈ ಸಲ ಕಪ್ ನಮ್ದೆ’ ಘೋಷಣೆ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. 12 ಆವೃತ್ತಿಯಿಂದ ಒಂದೇ ಒಂದು ಬಾರಿಯೂ ಚಾಂಪಿಯನ್ ಆಗದಿದ್ದರೂ ಅಭಿಮಾನಿಗಳಿಗೆ ಆರ್‌ಸಿಬಿ ಮೇಲಿನ ಅಭಿಮಾನ ಕೊಂಚವೂ ಕೂಡ ಕಡಿಮೆಯಾಗಿಲ್ಲ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸ ಅಭಿಮಾನಗಳಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *