– ನಮ್ಮ ಭಾಷೆ, ನಮ್ಮ ಹೆಮ್ಮೆ ಎಂದ ಅನಿಲ್ ಕುಂಬ್ಳೆ; ಕನ್ನಡದ ಹಿರಿಮೆ ಕೊಂಡಾಡಿದ ದಿನೇಶ್ ಕಾರ್ತಿಕ್
ಕರ್ನಾಟಕದ ಜನತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ತಂಡ ಕನ್ನಡ ರಾಜ್ಯೋತ್ಸವದ (Kannada Rajyotsav) ಶುಭಾಶಯ ತಿಳಿಸಿದೆ.
ನಾಡಿನ ಸಮಸ್ತ ಜನತೆಗೆ, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🙏
From all of us at RCB, we wish you a happy Kannada Rajyotsava! ❤️ pic.twitter.com/cEESeHn0DN
— Royal Challengers Bengaluru (@RCBTweets) November 1, 2025
ಇದೇ ನಾಡು, ಇದೇ ಭಾಷೆ… ಎಂದೆಂದೂ ನಮ್ಮದಾಗಿರಲಿ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದು ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಶುಭಕೋರಿದೆ. ಇದನ್ನೂ ಓದಿ: ಗಡಿನಾಡು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಮಧ್ಯರಾತ್ರಿ ಜಿಟಿಜಿಟಿ ಮಳೆಯಲ್ಲೇ ಆಚರಣೆ
ಇದೇ ನಾಡು, ಇದೇ ಭಾಷೆ… ಎಂದೆಂದೂ ನಮ್ಮದಾಗಿರಲಿ! 🟡🔴
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು! 🙏
Here’s wishing everyone from Namma Karnataka a Happy Rajyotsava! ❤#PlayBold #ನಮ್ಮRCB #KannadaRajyotsava pic.twitter.com/W3KTTYJR1F
— Royal Challengers Bengaluru (@RCBTweets) November 1, 2025
ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಸೇರಿ ಹಲವು ಆಟಗಾರರು ಕನ್ನಡ ರಾಜ್ಯೋತ್ಸವ ಶುಭಾಶಯ ತಿಳಿಸಿರುವ ಮತ್ತೊಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ಹೆಮ್ಮೆ — ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!#KannadaRajyotsava #NammaKarnataka
— Anil Kumble (@anilkumble1074) November 1, 2025
ಕನ್ನಡಿಗ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು, ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನಮ್ಮ ಹೆಮ್ಮೆ — ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
View this post on Instagram
ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ಬಣ್ಣಿಸಿ ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್ ವೀಡಿಯೋವೊಂದನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕರ್ನಾಟಕದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

