ಟಗರು ಲುಕ್‍ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

Public TV
1 Min Read
VIRAT KOHLI TAGARU LUCK

ಬೆಂಗಳೂರು: ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಗರು ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

VIRAT KOHLI

ಖಡಕ್ ಲುಕ್‍ನಲ್ಲಿರುವ ಟಗರಿನ ಮುಂದೆ ವಿರಾಟ್ ಕೊಹ್ಲಿ ನಿಂತಿರುವ ಪೋಸ್ಟ್‌ನ್ನು ಆರ್‌ಸಿಬಿ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್‌ನಲ್ಲಿ ಟಗರು ಕಣ್ಣನ್ನು ಕೆಂಪಾಗಿಸಿ ಕೊಹ್ಲಿಯನ್ನು ನೋಡುತ್ತಿದ್ದು, ಕೊಹ್ಲಿ ಕೂಡ ಕಣ್ಣು ಕೆಂಪಗೆ ಮಾಡಿಕೊಂಡು ಟಗರಿನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಆರ್​ಸಿಬಿಯಲ್ಲಿ K.G.F ಸ್ಟಾರ್ಸ್

virat kohli 4 e1632892981755

ಟಗರಿನ ಮುಂದೆ ಕೊಹ್ಲಿಯ ಫೋಟೋ ಕಂಡು ಆರ್​ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಕೊಹ್ಲಿಯ ಟಗರು ಲುಕ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೈದಾನದಲ್ಲಿ ಸಹ ಆಟಗಾರನಿಗೆ ಕಪಾಳಮೋಕ್ಷ ಮಾಡಿ ತಬ್ಬಿಕೊಂಡ ಹ್ಯಾರಿಸ್ ರೌಫ್ – ವೀಡಿಯೋ ವೈರಲ್

ಕೆಲದಿನಗಳ ಹಿಂದೆ ಕನ್ನಡದ ಚಿತ್ರ ಕೆಜಿಎಫ್ ಹೊಸ ಕ್ರೇಜ್ ಹುಟ್ಟುಹಾಕಿರುವಂತೆ ಆರ್​ಸಿಬಿ ತಂಡದಲ್ಲಿರುವ ಮೂವರು ಬ್ಯಾಟ್ಸ್‌ಮ್ಯಾನ್‌ಗಳಿಗೆ ಕೆಜಿಎಫ್ ಟೈಟಲ್ ನೀಡಲಾಗಿತ್ತು. ಆರ್​ಸಿಬಿ ತಂಡದಲ್ಲಿರುವ ಕೆ.ಜಿ.ಎಫ್‍ನ ಸ್ಟಾರ್‌ಗಳಾಗಿ K – ಕೊಹ್ಲಿ, G – ಗ್ಲೇನ್ ಮ್ಯಾಕ್ಸ್‌ವೆಲ್, F – ಫಾಫ್ ಡು ಪ್ಲೆಸಿಸ್ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟ್‌ನ್ನು ಆರ್‌ಸಿಬಿ ಫ್ರಾಂಚೈಸ್ ಪೋಸ್ಟ್ ಮಾಡಿತ್ತು. ಅಭಿಮಾನಿಗಳು ಕೂಡ ಈ ಕೆಜಿಎಫ್ ಸ್ಟಾರ್‌ಗಳನ್ನು ಮೆಚ್ಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *