ಬೆಂಗಳೂರು: ಐಪಿಎಲ್ (IPL 2023) 16ನೇ ಆವೃತ್ತಿಯ ಯಶಸ್ವಿಯಾಗಿ ಮುಗಿಯುವ ಹಂತಕ್ಕೆ ಬಂದಿದೆ. 10 ತಂಡಗಳು ಭಾಗಿಯಾಗಿದ್ದು, ಎಲ್ಲ ತಂಡಗಳಿಗೂ ತಲಾ ಒಂದೊಂದು ಲೀಗ್ ಪಂದ್ಯಗಳು ಬಾಕಿಯಿವೆ. ಅದರಲ್ಲೂ ಕ್ರೇಜ್ ಹೆಚ್ಚಿಸಿರುವ ಆರ್‌ಸಿಬಿ (RCB) ತಂಡ ಲೀಗ್ ಹಂತದ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಭಾನುವಾರ ನಡೆಯಲಿದ್ದು, ಪಂದ್ಯದ ಸೋಲು-ಗೆಲುವಿನ ಮೇಲೆ ಆರ್‌ಸಿಬಿ ಭವಿಷ್ಯ ನಿರ್ಧಾರವಾಗಲಿದೆ.
Advertisement
ಈಗಾಗಲೇ ಪ್ಲೇ ಆಫ್ ತಲುಪಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಅಗ್ರ ಸ್ಥಾನದಲ್ಲಿದ್ದು, ಭಾನುವಾರ ಆರ್‌ಸಿಬಿ ತಂಡದೊಂದಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿದೆ. ರಣರೋಚಕ ಪಂದ್ಯ ವೀಕ್ಷಣೆ ಮಾಡಲು ತಮಗೆ ಟಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಇದನ್ನೂ ಓದಿ: ಕೊಹ್ಲಿ, ಡುಪ್ಲೆಸಿಸ್ ಹೊಡೆತಕ್ಕೆ ರೈಸ್ ಆಗದ ಸನ್ – ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಜಯ; 4ನೇ ಸ್ಥಾನಕ್ಕೆ ಜಿಗಿದ RCB
Advertisement
Advertisement
ಗಲಾಟೆ, ಗದ್ದಲ ಎಬ್ಬಿಸಿದ್ದಲ್ಲದೇ ಟೀಂ ಇಂಡಿಯಾ (Team India) ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಾರನ್ನು ಅಡ್ಡಗಟ್ಟಿ ಸರ್ ಟಿಕೆಟ್ ಸಿಕ್ತಿಲ್ಲ ಎಂದು ಅಳಲುತೋಡಿಕೊಂಡರು. ಟಿಕೆಟ್ ಸಿಗೋವರೆಗೂ ಸದ್ಯ ಆರ್‌ಸಿಬಿ ಅಭಿಮಾನಿಗಳು ರಾಹುಲ್ ದ್ರಾವಿಡ್ ಅವರನ್ನು ಮುಂದಕ್ಕೆ ಬಿಡುವಂತೆ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ಪೊಲೀಸರು ಅಭಿಮಾನಿಗಳನ್ನು ಹಿಂದೆ ಸರಿಸಿ ರಾಹುಲ್ ದ್ರಾವಿಡ್ ಅವರು ತೆರಳಲು ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: RCB ಪ್ಲೇ ಆಫ್ ಲೆಕ್ಕಾಚಾರ ಏನು? – ಮತ್ತೆ ಮುಖಾಮುಖಿಯಾಗ್ತಾರಾ ಕೊಹ್ಲಿ-ಗಂಭೀರ್?
Advertisement
ಈ ಬಾರಿ ಪ್ಲೇ ಆಫ್ ಪ್ರವೇಶಿಸಲು ಆರ್‌ಸಿಬಿ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ಪಡೆಯನ್ನು ಸೋಲಿಸಲೇಬೇಕಿದೆ. ಒಂದು ವೇಳೆ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಎದುರು ಸೋತರೆ, ಮುಂಬೈ ಇಂಡಿಯನ್ಸ್ ಸಹ ಹೈದರಾಬಾದ್ ಎದುರು ಸೋಲಬೇಕಾಗುತ್ತದೆ. ಆಗಷ್ಟೇ ಆರ್‌ಸಿಬಿ ಪ್ಲೇ ಆಫ್ ಅವಕಾಶ ಪಡೆದುಕೊಳ್ಳಲಿದೆ.