ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ (ESCN) ಎನ್ನುತ್ತಿದ್ದ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಈಡೇರಿದ್ದು, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ.
ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB ಟ್ರೆಂಡ್ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ(Bengaluru) ಹಲವೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳ ಆರ್‌ಸಿಬಿ ಆರ್‌ಸಿಬಿ ಎಂದು ಹೇಳಿ ಘೋಷಣೆ ಮೊಳಗಿಸುತ್ತಿದ್ದರು.
Electronic City Phase II🔥🔥 RCB😍 pic.twitter.com/2q2KpD4Upt
— Fan18 (@kingfc_18) March 17, 2024
ಈ ಸಂಭ್ರಮಕ್ಕೆ ಕಾರಣವೂ ಇತ್ತು. ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಗ್ಲೇನ್ ಮ್ಯಾಕ್ಸ್‌ವೆಲ್‌ರಂತಹ ಘಟಾನುಘಟಿ ಆಟಗಾರರಿದ್ದರೂ ಇಲ್ಲಿಯವರೆಗೆ ಕಪ್ ಗೆದ್ದಿರಲಿಲ್ಲ. ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್!
https://twitter.com/ustadkalyan/status/1769415797804527779?t=AjwwXqpJ788e1ZePmaqcaw&s=08
ಕಳೆದ 16 ಐಪಿಎಲ್ (IPL) ಟೂರ್ನಿ ಪೈಕಿ ಪುರುಷರ ತಂಡ 2009, 2011, 2016 ಫೈನಲ್ ಪ್ರವೇಶಿಸಿದ್ದರೂ ರನ್ನರ್ ಅಪ್‌ಗೆ ತೃಪ್ತಿಪಟ್ಟಿತ್ತು. ಆದರೆ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಆರ್‌ಸಿಬಿ ಅಭಿಮಾನಿಗಳ ಬಹು ವರ್ಷದ ಕನಸು ಈಡೇರಿತು.
🗣️ RCB RCB RCB
Just under two hours left for #WPL2024 final and this is the scene at the Delhi Gate metro station. It's a "home" game for Delhi, but looks it'll be anything but 😅 pic.twitter.com/lrfdnO6ZEc
— Vinayakk (@vinayakkm) March 17, 2024
ಫೈನಲ್ ಪಂದ್ಯದ ವೇಳೆ ಮಾತನಾಡಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ (Shreyanka Patil) ಪ್ರತಿಬಾರಿಯೂ ನಮ್ಮ ತಂಡವನ್ನು ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಹೇಳಿ ಹುರಿದುಂಬಿಸುತ್ತಿದ್ದರು. ಈ ಬಾರಿ ನಾವು ಕಪ್ ಗೆದ್ದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧೋನಿ ಟ್ರೆಂಡ್ ಮುಂದುವರಿಸಿದ ಸ್ಮೃತಿ – ಮಂಧಾನ ನಾಯಕತ್ವಕ್ಕೆ ಭೇಷ್ ಅಂದ್ರು ಫ್ಯಾನ್ಸ್!

ನಾಯಕಿ ಸ್ಮೃತಿ ಮಂಧನಾ(Smriti Mandhana), ಪ್ರತಿಬಾರಿ ಅಭಿಮಾನಿಗಳು “ಈ ಸಲ ಕಪ್ ನಮ್ದೇ” ಎಂದು ಹೇಳುತ್ತಿದ್ದರು. ಆದರೆ ಈ ಬಾರಿ “ಈ ಸಲ ಕಪ್ ನಮ್ದು” ಎಂದು ಹೇಳಬಹುದು ಎಂದು ಸಂತಸ ವ್ಯಕ್ತಪಡಿಸಿದರು.

