ಲಕ್ನೋ: 9 ವರ್ಷಗಳ ಬಳಿಕ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕ್ವಾಲಿಫೈಯರ್ 1ನಲ್ಲಿ ಕಾಣಿಸಿಕೊಂಡಿದೆ.
2016ರ ಆವೃತ್ತಿಯಲ್ಲಿ ಆರ್‌ಸಿಬಿ ಕ್ವಾಲಿಫೈಯರ್ 1ಗೆ ಎಂಟ್ರಿ ಕೊಟ್ಟಿತ್ತು. ಆಗ ಗುಜರಾತ್ ಲಯನ್ಸ್ (ಆಗ ಜಿಎಲ್) ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫೈಯರ್ 1 ರಲ್ಲಿ ಸೆಣಸಿತ್ತು.
2016ರಲ್ಲಿ ಕ್ವಾಲಿಫೈಯರ್ 1ಗೆ ಲಗ್ಗೆಯಿಟ್ಟಿದ್ದ ಆರ್‌ಸಿಬಿ ಗುಜರಾತ್ ಲಯನ್ಸ್ ವಿರುದ್ಧ ಗೆದ್ದು ಫೈನಲ್ ತಲುಪಿತ್ತು. ಈ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್‌ಗಳಿಂದ ಸೋತು ನಿರಾಸೆ ಅನುಭವಿಸಿತ್ತು.
ಅದಾದ ಬಳಿಕ ಈಗ ಮತ್ತೆ (2025) ಆರ್‌ಸಿಬಿ ಕ್ವಾಲಿಫೈಯರ್ 1 ಗೆ ಲಗ್ಗೆ ಇಟ್ಟಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಗಳವಾರ ನಡೆದ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಬೀಗಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.