ರಾಜ್‍ಕೋಟ್: ಟಿ 20 ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಟಾಪ್ ಆಟಗಾರ, ಆರ್‍ಸಿಬಿಯ ಓಪನಿಂಗ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐತಿಹಾಸಿಕ ಮೇಲಿಗಲ್ಲನ್ನು ಬರೆದಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕಿಗೆ ಗೇಲ್ ಈಗ ಪಾತ್ರರಾಗಿದ್ದಾರೆ.
ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 63 ರನ್ ಗಳಿಸಿದ ವೇಳೆ ಗೇಲ್ ಈ ಮೈಲಿಗಲ್ಲನ್ನು ಬರೆದಿದ್ದಾರೆ. ಈ ಪಂದ್ಯವನ್ನು ಆರ್‍ಸಿಬಿ 21 ರನ್‍ಗಳಿಂದ ಗೆದ್ದುಕೊಂಡಿದ್ದು, 38 ಎಸೆತದಲ್ಲಿ 77 ರನ್(5 ಬೌಂಡರಿ, 7 ಸಿಕ್ಸರ್) ಚಚ್ಚಿದ್ದ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
Advertisement
ಈ ಪಂದ್ಯಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಗೇಲ್ 32, 6, 22 ರನ್‍ಗಳನ್ನು ಹೊಡೆದಿದ್ದರು. ಎರಡು ಪಂದ್ಯಗಳಿಂದ ಹೊರಗಡೆ ಉಳಿದಿದ್ದ ಕಾರಣ ಈ ಮೈಲಿಗಲ್ಲನ್ನು ಬರೆಯಲು ವಿಳಂಬವಾಗಿತ್ತು.
Advertisement
ಗೇಲ್ ನಂತರದ ಸ್ಥಾನದಲ್ಲಿ 7,596 ರನ್ ಹೊಡೆದ ನ್ಯೂಜಿಲೆಂಡಿನ ಬ್ರೆಂಡಮ್ ಮೆಕ್ಕಲಂ ಇದ್ದರೆ 7,338 ರನ್‍ಗಳಿಸುವ ಮೂಲಕ ಬ್ರಾಡ್ ಹಾಡ್ಜ್ ಮೂರನೇ ಸ್ಥಾನದಲ್ಲಿ ಇದ್ದಾರೆ.
Advertisement
ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕಗೆ ಸಚಿನ್ ಪಾತ್ರವಾಗಿದ್ದರೆ, ಟೆಸ್ಟ್ ನಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಸುನೀಲ್ ಗವಾಸ್ಕರ್ ಭಾಜನರಾಗಿದ್ದಾರೆ.
10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆರ್‍ಸಿಬಿ ತಂಗಿದ್ದ ಹೊಟೇಲ್‍ನಲ್ಲಿ ಸಂಭ್ರಮ ಮನೆ ಮಾಡಿತ್ತು. ಗೇಲ್ ಕೇಕ್ ಕತ್ತರಿಸಿ ಈ ಸಂಭ್ರಮವನ್ನು ಆಚರಿಸಿದರು.