Wednesday, 21st November 2018

Recent News

ಆರ್‌ಸಿಬಿ ಟೀಂ ಭೇಟಿಗೆ ತೆರಳಿದ್ದ ಮಿ.ನಾಗ್ ಮೇಲೆ ಗುಡುಗಿದ ವಿರಾಟ್ ಕೊಹ್ಲಿ

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡದ ವಿರುದ್ಧ ಗೆಲವು ಪಡೆದಿದ್ದ ಆರ್‌ಸಿಬಿ ತಂಡ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿತ್ತು. ಈ ವೇಳೆ ಆರ್‌ಸಿಬಿ ಟೀಂ ಉಳಿದುಕೊಂಡಿರುವ ಹೋಟೆಲ್‍ಗೆ ಬಂದಿದ್ದ ಮಿ.ನಾಗ್ ಮೇಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುಡುಗಿದ್ದಾರೆ.

ಎಂದಿನಂತೆ ಮೋಜು ಮಸ್ತಿಯಲ್ಲಿ ತೊಡಗಿದ್ದ ನಾಗ್ ಎಲ್ಲ ಆಟಗಾರರೊಂದಿಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ರು. ಮಿ.ನಾಗ್ ಪ್ರಶ್ನೆಗಳನ್ನು ಕೇಳಿದ ವಿರಾಟ್ ಕೊಹ್ಲಿ ಕೋಪಗೊಂಡಿದ್ದಾರೆ.

ನಾಗ್ ಹೇಳಿದ್ದೇನು?: ಕರ್ನಾಟಕದಲ್ಲಿ ಚುನಾವಣೆ ಬರುತ್ತಿದೆ ಹಾಗಾಗಿ ಎಲ್ಲ ಆಟಗಾರರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಹೇಳುತ್ತಿದ್ದರು. ಹಲವಾರು ಜನ ನನಗೆ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಮಾಡಿಸುವುದರ ಬಗ್ಗೆ ಪ್ರಶ್ನಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಎಲ್ಲರ ಹತ್ತಿರ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಇರಬೇಕೆಂದು ನನ್ನ ಆಶಯ. ಆರ್‌ಸಿಬಿ ಟೀಂನಲ್ಲಿರುವ ಭಾರತ ಆಟಗಾರರಲ್ಲದೇ ವಿದೇಶಿ ಆಟಗಾರರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಮಾಡಿಸಬೇಕೆಂದು ಮಿ. ನಾಗ್ ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಆಧಾರ್ ಕಾರ್ಡ್ ಗಾಗಿ ಮಿ. ನಾಗ್ ಹಲವು ಆಟಗಾರರ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡರು. ಇದೇ ವಿಷಯಕ್ಕಾಗಿ ಮಿ.ನಾಗ್ ಮತ್ತು ಅವರ ಕ್ಯಾಮೆರಾಮೆನ್ ನಡುವೆ ವಾಗ್ವಾದವು ನಡೆಯಿತು.

ಸಮಯ ವ್ಯರ್ಥ: ಮಿ. ನಾಗ್‍ನ ಈ ವರ್ತನೆಯಿಂದ ವಿರಾಟ್ ಕೊಹ್ಲಿ ಅವರ ಮೇಲೆ ಕೋಪಗೊಂಡು, ನೀವು ಯಾವಾಗಲೂ ಜನರ ಸಮಯವನ್ನು ಹಾಳು ಮಾಡುತ್ತೀರ. ಪ್ರತಿ ವರ್ಷ ಹೀಗೆ ಮಾಡುತ್ತೀರ. ನೀನು ನಿನ್ನ ಬ್ಲಡಿ ಹೇರ್ ಬ್ಯಾಂಡ್ ಕೂಡ ಚೇಂಜ್ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ಅಸಮಾಧಾನ ಹೊರ ಹಾಕಿದ್ರು.

ನನಗೆ ಇದು ಅರ್ಥವಾಗುತ್ತಿಲ್ಲ. ನನ್ನ ಆಧಾರ್ ಕಾರ್ಡ್ ಯಾಕೆ ಮಾಡಲಾಗುತ್ತಿದೆ. ನನಗೆ ಬೆಂಗಳೂರು ಎಂದರೆ ಇಷ್ಟ. ಹಾಗಾಂತ ನಾನು ವೋಟ್ ಮಾಡಲು ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ಆಟಗಾರ ಬ್ರೆಂಡಮ್ ಮೆಕಲಮ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶಿಗರು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಏಕೆ ಮಾಡಿಸಬೇಕು, ಅವರು ಇಲ್ಲಿ ಇರುವುದ್ದೀಲ್ಲ. ಇದ್ದೆಲ್ಲ ಯಾಕೆ ಎಂದು ಯಜುವೆಂದರ್ ಚಹಲ್ ಹೇಳಿದ್ದರು.

ಈ ಕುರಿತು ಮಾತನಾಡಿದ ಮಿ.ನಾಗ್, ಇದೊಂದು ಫನ್ನಿ ವಿಡಿಯೋ ಇದಾಗಿದ್ದು, ಈ ಬಾರಿ ಎಲ್ಲರೂ ತಮ್ಮ ಬೆರಳನ್ನು ವೋಟ್ ಮಾಡೋಕ್ಕೆ ಉಪಯೋಗಿಸಬೇಕೆಂಬ ಸಂದೇಶವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *