ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಟೂರ್ನಿಯಲ್ಲಿ ತಮ್ಮನ್ನು 49 ರನ್ ಗಳಿಗೆ ಆಲೌಟ್ ಮಾಡಿದ್ದ ಆಟಗಾರರ ಮೇಲೆ ಸ್ವೀಟ್ ರಿವೆಂಜ್ ತಿರಿಸಿಕೊಂಡಿದ್ದು, ತಾವು ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣರಾಗಿದ್ದ ನಾಲ್ಕು ವೇಗದ ಬೌಲರ್‍ಗಳನ್ನು ಈ ಬಾರಿ ಖರೀದಿಸಿದೆ.
ಈ ಬಾರಿಯ ಹರಾಜಿನ ವೇಳೆ ಆರ್ ಸಿಬಿ ಅಚ್ಚರಿ ಎನ್ನುವಂತೆ ಕಳೆದ ಬಾರಿ ತಮ್ಮ ತಂಡ ಸೋಲಿಗೆ ಕಾರಣವಾಗಿದ್ದ ಕ್ರಿಸ್ ವೋಕ್ಸ್ (7.4 ಕೋಟಿ ರೂ.), ಉಮೇಶ್ ಯಾದವ್ (4.2 ಕೋಟಿ ರೂ.), ನಾಥನ್ ಕೌಲ್ಟರ್-ನೈಲ್ ಮತ್ತು ಕಾಲಿನ್ ಡೆ ಗ್ರಾಂಡ್ ಹೋಮ್ (ತಲಾ 2.2 ಕೋಟಿ ರೂ.) ರನ್ನು ಖರೀದಿಸಿದೆ. ಈ ಮೂಲಕ ಆರ್ ಸಿಬಿ ತನ್ನ ತಂಡದ ಬೌಲಿಂಗ್ ಸಾಮರ್ಥ್ಯನ್ನು ಹೆಚ್ಚಿಸಿಕೊಂಡಿದೆ.
Advertisement
Advertisement
ಐಪಿಎಲ್ ಟೂರ್ನಿ ಆರಂಭದಿಂದಲೂ ಬ್ಯಾಂಟಿಂಗ್ ನಲ್ಲಿ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪ್ರಾಂಚೈಸಿಗಳು ಉತ್ತಮ ಬೌಲರ್ ಗಳನ್ನು ಆಯ್ಕೆ ಮಾಡುವುದರಲ್ಲಿ ವಿಫಲವಾಗುತಿತ್ತು. ಆದರೆ ಈ ಬಾರಿ ಆರ್ ಸಿಬಿ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ.
Advertisement
ಐಪಿಎಲ್ 2017ರ ಟೂರ್ನಿಯ 27ನೇ ಪಂದ್ಯದ ಕೋಲ್ಕತ್ತಾ ಹಾಗೂ ಆರ್ ಸಿಬಿ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಕೋಲ್ಕತ್ತಾ 131 ರನ್‍ಗಳ ಅಂತರದಲ್ಲಿ ಭಾರೀ ಗೆಲುವು ಪಡೆದಿತ್ತು. ಆರ್ ಸಿಬಿ ಪರ ಯಾವೊಬ್ಬ ಆಟಗಾರ ಸಹ ಎರಡಂಕ್ಕಿಯನ್ನು ದಾಟದೆ ತಂಡ ಕೇವಲ 49 ರನ್ ಗಳಿಗೆ ಆಲೌಟ್ ಆಗಿತ್ತು.
Advertisement
ಈ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಪರ ಕ್ರಿಸ್ ವೋಕ್ಸ್, ನಾಥನ್ ಕೌಲ್ಟರ್-ನೈಲ್ ಮತ್ತು ಕಾಲಿನ್ ಡೆ ಗ್ರಾಂಡ್ ಹೋಮ್ ತಲಾ 3 ವಿಕೆಟ್ ಪಡೆದರೆ. ಉಮೇಶ್ ಯಾದವ್ 1 ವಿಕೆಟ್ ಪಡೆದು ಆರ್ ಸಿಬಿ ಸೋಲಿಗೆ ಕಾರಣರಾಗಿದ್ದರು. ಆದರೆ ಈ ಬಾರಿ ನಾಲ್ಕು ಬೌಲರ್ ಗಳು ಆರ್ ಸಿಬಿ ತಂಡದ ಪರ ಆಡಲಿದ್ದಾರೆ. ಈ ಮೂಲಕ ಆರ್ ಸಿಬಿ ಪ್ರಾಂಚೈಸಿಗಳು ಸ್ವೀಟ್ ರಿವೆಂಜ್ ತೋರಿಸಿದ್ಧಾರೆ.