ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangaluru) ಮಹಿಳಾ ತಂಡದ (RCB women’s team) ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ (Luke Williams) ನೇಮಕಗೊಂಡಿದ್ದಾರೆ.
ಅಡಿಲೇಡ್ ಮೂಲದ ಮಾಜಿ ಕ್ರಿಕೆಟಿಗ ಲ್ಯೂಕ್, ದಕ್ಷಿಣ ಆಸ್ಟ್ರೇಲಿಯಾ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಅಲ್ಲದೇ ಅಡಿಲೇಡ್ ಸ್ಟ್ರೈಕರ್ಸ್‍ನ ಮುಖ್ಯ ತರಬೇತುದಾರರಾಗಿ ನಾಲ್ಕು ಋತುವಿನ ಅವಧಿಯಲ್ಲಿ ಎರಡು ರನ್ನರ್-ಅಪ್ ಮುಗಿಸಿದ್ದಾರೆ. ಬಳಿಕ 2022-2023ರಲ್ಲಿ ಮೊದಲ ಮಹಿಳಾ ಬಿಗ್ ಬ್ಯಾಷ್ ಲೀಗ್ ಗೆಲುವಿಗೆ ತಂಡದ ಕೋಚ್ ಆಗಿದ್ದರು. ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಅಲ್ಲ, ವಿಶ್ವ ಟೆರರ್ ಕಪ್ ಮಾಡ್ತೀವಿ – ಖಲಿಸ್ತಾನ್ ಉಗ್ರನಿಂದ ಬೆದರಿಕೆ
ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್‍ನಲ್ಲಿ ದಕ್ಷಿಣ ಆಸ್ಟ್ರೇಲಿಯನ್ ಸ್ಕಾರ್ಪಿಯಾನ್ಸ್ ತಂಡಕ್ಕೆ ನಾಲ್ಕು ವರ್ಷಗಳ ಕಾಲ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಎರಡು ಬಾರಿ ತಂಡ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಅಲ್ಲದೇ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಎ ತಂಡಕ್ಕೆ ಮುಖ್ಯ ಕೋಚ್ ಸಹ ಆಗಿದ್ದರು.
ಈ ವಿಚಾರವಾಗಿ ಆರ್‌ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಲ್ಯೂಕ್ ವಿಲಿಯಮ್ಸ್ ಅವರು ಆರ್‍ಸಿಬಿ ಮಹಿಳಾ ತಂಡದ ಕೋಚ್ ಆಗಲಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಅವರ ಮಾರ್ಗದರ್ಶನದಿಂದ ನಮ್ಮ ತಂಡ ಧೈರ್ಯಶಾಲಿಯಾಗಿ ಆಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೇ ಪಾಕ್‌ಗೆ ಸೋಲಿನ ರುಚಿ – ಕಿವೀಸ್‌ಗೆ 5 ವಿಕೆಟ್‌ಗಳ ಜಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]