ಮುಂಬೈ/ಬೆಂಗಳೂರು: 16 ಆವೃತ್ತಿ ಕಳೆದರೂ IPL ಟ್ರೋಫಿ (IPL Trophy) ಗೆಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೋಚಿಂಗ್ ಬಳಗವನ್ನ ಬದಲಾಯಿಸಿದ್ದು, ಜಿಂಬಾಬ್ವೆಯ ದಿಗ್ಗಜ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಮುಖ್ಯ ಕೋಚ್ ಆಂಡಿ ಫ್ಲವರ್ (Andy Flower) ಅವರನ್ನ ಆರ್‌ಸಿಬಿ ಮುಖ್ಯಕೋಚ್ ಆಗಿ ನೇಮಿಸಿಕೊಂಡಿದೆ.
We are beyond thrilled to welcome ???????????? ???????????????? ???????? ???????????????????? and ???????????? ???????????????????? ???????????? winning coach ???????????????? ???????????????????????? as the ???????????????? ???????????????????? of RCB Men’s team. ????????
Andy’s experience of coaching IPL & T20 teams around the world, and leading his teams to titles… pic.twitter.com/WsMYGCkcYT
— Royal Challengers Bangalore (@RCBTweets) August 4, 2023
Advertisement
16 ಆವೃತ್ತಿಗಳಲ್ಲಿ ಮೂರ್ನಾಲ್ಕು ಬಾರಿ ಆರ್‌ಸಿಬಿ ತಂಡವನ್ನ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದೇ ನಿರಾಸೆಗೊಂಡಿತ್ತು. 2023ರ 16ನೇ ಆವೃತ್ತಿಯ ಕೊನೆ ಪಂದ್ಯದಲ್ಲೂ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಆರ್‌ಸಿಬಿ ತಂಡ ಪ್ಲೇ ಆಫ್‌ನಿಂದ ಹೊರಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೋಚಿಂಗ್ ಬಳಗವನ್ನ RCB ಫ್ರಾಂಚೈಸಿ ಬದಲಾಯಿಸಿದೆ. ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೇಸನ್ (Mike Hesson) ಮತ್ತು ಮುಖ್ಯ ಕೋಚ್ ಸಂಜಯ್ ಬಾಂಗರ್ (Sanjay Bangar) ಜೊತೆಗಿನ ಒಪ್ಪಂದ ಅಂತ್ಯಗೊಳಿಸಿದೆ.
Advertisement
Advertisement
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಜಿಂಬಾಬ್ವೆ ತಂಡದ ಪರ 63 ಟೆಸ್ಟ್ ಮತ್ತು 213 ಏಕದಿನ ಕ್ರಿಕೆಟ್ ಪಂದ್ಯಗಳನ್ನ ಆಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಂಡಗಳಿಗೆ ಕೋಚಿಂಗ್ ಮಾಡಿದ ಅನುಭವ ಹೊಂದಿದ್ದಾರೆ. 2010ರಲ್ಲಿ ಆಂಡಿ ಫ್ಲವರ್ ಕೋಚಿಂಗ್ ಬಲದೊಂದಿಗೆ ಇಂಗ್ಲೆಂಡ್ ತಂಡ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಇದನ್ನೂ ಓದಿ: `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?
Advertisement
ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ನ ಕೋಚ್ ಆಗಿದ್ದ ಅವರು, 2022 ರಲ್ಲಿ ಲಕ್ನೋ ಸೇರಿದ್ದರು. ಅವರು ಗೌತಮ್ ಗಂಭೀರ್ ಮತ್ತು ನಾಯಕ ರಾಹುಲ್ ಅವರೊಂದಿಗೆ ಕೆಲಸ ನಿರ್ವಹಿಸಿದ್ದಾರೆ.
ಐಸಿಸಿ ಹಾಲ್ ಆಫ್ ಫೇಮರ್ ಮತ್ತು ಟಿ20 ವಿಶ್ವಕಪ್ ವಿಜೇತ ಕೋಚ್ ಆಂಡಿ ಫ್ಲವರ್ ಅವರನ್ನು ಆರ್‌ಸಿಬಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಹಳೆ ಕೋಚ್ ಬಳಗಕ್ಕೆ ಗೇಟ್ ಪಾಸ್:
2019ರಲ್ಲಿ ಆರ್‌ಸಿಬಿ ತಂಡ ನ್ಯೂಜಿಲೆಂಡ್‌ನ ಮೈಕ್ ಹೇಸನ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ವರ್ಷ ಮುಖ್ಯ ಕೋಚ್ ಆಗಿದ್ದ ಅವರನ್ನ ನಂತರ ಕ್ರಿಕೆಟ್ ಡೈರೆಕ್ಟರ್ ಮಾಡಿ, ಮುಖ್ಯ ಕೋಚ್ ಸ್ಥಾನಕ್ಕೆ ಸಂಜಯ್ ಬಾಂಗರ್ ಅವರನ್ನ ನೇಮಿಸಲಾಯಿತು. ಹೇಸನ್ ಮತ್ತು ಬಂಗಾರ್ ಜೋಡಿಯ ಸಾರಥ್ಯದಲ್ಲಿ 2020, 2021 ಮತ್ತು 2022ರ ಆವೃತ್ತಿಗಳಲ್ಲಿ ಸತತವಾಗಿ ಪ್ಲೇ ಆಫ್ ತಲುಪಿದ್ದ ಆರ್‌ಸಿಬಿ ಐಪಿಎಲ್ 2023 ಟೂರ್ನಿಯಲ್ಲಿ ನಾಕ್‌ಔಟ್ ಹಂತಕ್ಕೇರಲು ವಿಫಲವಾಯಿತು. 16ನೇ ಆವೃತ್ತಿಯಲ್ಲೂ ಉತ್ತಮ ತಂಡ ಹೊಂದಿದ್ದರೂ ಪ್ಲೇ ಆಫ್‌ನಿಂದ ಹೊರಗುಳಿದ ಕಾರಣ ಆರ್‌ಸಿಬಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ
ಆಂಡಿ ಫ್ಲವರ್ ಯಾರು?
2022ರ ಆವೃತ್ತಿಯಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದ ಆಂಡಿ ಫ್ಲವರ್ (55), ಚೊಚ್ಚಲ ಆವೃತ್ತಿಯಲ್ಲೇ ಫ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು. 2023ರ ತನ್ನ 2ನೇ ಆವೃತ್ತಿಯಲ್ಲೂ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ತಂಡ ಪ್ಲೇ-ಆಫ್ ಎಂಟ್ರಿ ಕೊಟ್ಟಿತ್ತು. 2022ರಲ್ಲಿ ಎಲ್‌ಎಸ್‌ಜಿ ತಂಡ ಸೇರಿದ್ದ ಫ್ಲವರ್, ಮೆಂಟರ್ ಗೌತಮ್ ಗಂಭೀರ್ ಜೊತೆಗೂಡಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನೂ ಲಕ್ನೋ ತಂಡ ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನ ತನ್ನ ನೂತನ ಮುಖ್ಯ ಕೋಚ್ ಆಗಿ ತೆಗೆದುಕೊಂಡಿದೆ. ಆರ್‌ಸಿಬಿ ಮುಖ್ಯಕೋಚ್ ತೆಗೆದುಕೊಂಡಿರುವುದಕ್ಕೆ ಫ್ಲವರ್ ಸಂತಸ ವ್ಯಕ್ತಪಡಿಸಿದ್ದಾರೆ.
Web Stories