ನವದೆಹಲಿ: ಆರ್‍ಬಿಐ ಶೀಘ್ರದಲ್ಲೇ 200 ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.
Advertisement
ಕಳೆದ ತಿಂಗಳು ನಡೆದ ಸಭೆಯಲ್ಲಿ ಆರ್‍ಬಿಐ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ ನಂತರವಷ್ಟೆ 200 ರೂ. ನೋಟುಗಳ ಮುದ್ರಣ ಆರಂಭವಾಗಲಿದೆ. ಒಂದು ವೇಳೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ್ರೆ ಜೂನ್ ಬಳಿಕ ಮುದ್ರಣ ಕಾರ್ಯ ಆರಂಭವಾಗಲಿದೆ ಎಂದು ವರದಿಯಾಗಿದೆ. ಅದ್ರೆ ಈ ಬಗ್ಗೆ ಆರ್‍ಬಿಐ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಇದನ್ನೂ ಓದಿ: ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು
Advertisement
2016ರ ನವೆಂಬರ್ 8ರಂದು ಹಳೇ 500 ಹಾಗೂ 1000 ರೂ. ನೋಟ್‍ಗಳನ್ನು ನಿಷೇಧಿಸಿದ್ದ ಮೋದಿ ಸರ್ಕಾರ ಹೊಸ ವಿನ್ಯಾಸದ 500 ರೂ. ಹಾಗೂ ಗುಲಾಬಿ ಬಣ್ಣದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡಿತ್ತು.
ಇನ್ನು 1 ಸಾವಿರ ರೂ. ನೋಟು ಕೂಡ ಹೊಸ ವಿನ್ಯಾಸದೊಂದಿಗೆ ಮತ್ತೆ ಬಿಡುಗಡೆಯಾಗಲಿದೆ ಎಂಬ ವದಂತಿಯೂ ಇತ್ತು. ಆದರೆ 1000 ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ?