ನವದೆಹಲಿ: ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ವಿಶೇಷ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರ ತರುತ್ತಿದೆ.
ಆರ್‌ಬಿಐ ನಾಣ್ಯದ ಕುರಿತು ವಿವರಣೆಗಳ ಬಗ್ಗೆ ಮಾಹಿತಿ ನೀಡಿದೆ. ನಾಣ್ಯದ ಸುತ್ತಳತೆ 44 ಮಿ.ಮೀ ಇದ್ದು, ಇದರ ತಯಾರಿಕೆಯಲ್ಲಿ ತವರ(05%), ತಾಮ್ರ(40%), ಬೆಳ್ಳಿ (50%), ಬಿಳಿ ಲೋಹ(5%) ಬಳಸಲಾಗಿದೆ ಎಂದು ತಿಳಿಸಿದೆ.
Advertisement
Advertisement
ನಾಣ್ಯದ ಒಂದು ಮುಖ ಭಾಗದಲ್ಲಿ ಅಶೋಕ ಸ್ತಂಭದ ಚಿತ್ರವಿದ್ದು, ಅದರ ಕೆಳಗೆ ಸತ್ಯಮೇವ ಜಯತೆ ಘೋಷಣೆ, ಎಡ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ `ಭಾರತ’ ಎಂದು ಹಾಗೂ ಬಲ ಭಾಗದಲ್ಲಿ ಇಂಗ್ಲೀಷ್ ಭಾಷೆಯಲ್ಲಿ `ಇಂಡಿಯಾ’ ಬರೆಯಲಾಗಿರುತ್ತದೆ. ಅಶೋಕ ಸ್ತಂಭದ ಕೆಳಗೆ ರೂಪಾಯಿ ಲಾಂಛನ ಹಾಗೂ ನಾಣ್ಯದ ಮೌಲ್ಯವನ್ನು ತಿಳಿಸುವ ‘350’ ಚಿಹ್ನೆ ಇರುತ್ತದೆ ಎಂದು ತಿಳಿಸಿದೆ.
Advertisement
ನಾಣ್ಯದ ಮತ್ತೊಂದು ಭಾಗದಲ್ಲಿ “ತಕ್ತ ಶ್ರೀ ಹರಿಮಂದಿರ್ ಜಿ ಪಟ್ನ ಸಾಹಿಬ್” ಚಿತ್ರ. ಮೇಲ್ಭಾಗದಲ್ಲಿ “ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ ಉತ್ಸವ” ಎಂದು ದೇವನಾಗರಿ ಅಂಕಿ ಮತ್ತು ಕೆಳಗೆ ಇಂಗ್ಲೀಷ್ ನಲ್ಲಿ ಬರೆಯಲಾಗಿರುತ್ತದೆ. ಹಾಗೆಯೇ ಚಿತ್ರದ ಎಡ ಮತ್ತು ಬಲ ಭಾಗದಲ್ಲಿ `1666′, `2016′ ಎಂದು ನಮೂದಿಸಲಾಗಿರುತ್ತದೆ ಎಂದು ತಿಳಿಸಿದೆ.
Advertisement
ಪ್ರಮುಖವಾಗಿ ನಾಣ್ಯ 34.65 ಗ್ರಾಂ ನಿಂದ 35.35 ಗ್ರಾಂ ತೂಕ ಹೊಂದಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
1666 ಡಿಸೆಂಬರ್ 22ರಂದು ಪಾಟ್ನಾದಲ್ಲಿ ಜನಿಸಿದ್ದ ಗುರು ಗೋಬಿಂದ್ ಸಿಂಗ್ 1708 ಅಕ್ಟೋಬರ್ 8ರಂದು ಮಹಾರಾಷ್ಟ್ರದ ನಾಂದೇಡ್ ನಲ್ಲಿ ವಿಧಿವಶರಾಗಿದ್ದರು.