ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು ಶೇ.6.50 ಗೆ ಹೆಚ್ಚಳ ಮಾಡಿದೆ. ರೆಪೋ ದರವನ್ನು (Repo Rate) 25 ಮೂಲಾಂಶ ಅಂದರೆ, ಶೇ.6.50ಗೆ ಹೆಚ್ಚಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ಬುಧವಾರ ಹಣಕಾಸು ನೀತಿ ಪ್ರಕಟಿಸಿ, ರೆಪೋ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದ್ದಾರೆ. ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಹೆಚ್ಚಳವಾಗಲಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ
Advertisement
Advertisement
ಜಾಗತಿಕ ಆರ್ಥಿಕತೆಯು ಕೆಲವು ತಿಂಗಳುಗಳ ಹಿಂದೆ ಇದ್ದಂತೆ ಈಗ ಕಠಿಣವಾಗಿ ಕಾಣುತ್ತಿಲ್ಲ. ಹಣದುಬ್ಬರದ ನಡುವೆ ಪ್ರಮುಖ ಆರ್ಥಿಕತೆಗಳಲ್ಲಿನ ಬೆಳವಣಿಗೆಯ ನಿರೀಕ್ಷೆಗಳು ಸುಧಾರಿಸಿದೆ. ಆದರೂ ಹಣದುಬ್ಬರವು ಇನ್ನೂ ಪ್ರಮುಖ ಆರ್ಥಿಕತೆಗಳಲ್ಲಿ ಗುರಿಗಿಂತ ಉತ್ತಮವಾಗಿದೆ. 2023-24ರ 4ನೇ ತ್ರೈಮಾಸಿಕದಲ್ಲಿ ಹಣದುಬ್ಬರ ಸರಾಸರಿ 5.6% ಎಂದು ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
2023-24 ರ ನೈಜ GDP ಬೆಳವಣಿಗೆಯು 6.4% ನಿರೀಕ್ಷಿಸಿದೆ. Q1 ನಲ್ಲಿ 7.8%, Q2 ನಲ್ಲಿ 6.2%, Q3 ನಲ್ಲಿ 6% ಮತ್ತು Q4 ನಲ್ಲಿ 5.8% ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪರಸ್ಪರ ಡಿಕ್ಕಿಯಾಗಿ ಆಳವಾದ ಕಂದರಕ್ಕೆ ಉರುಳಿದ ಬಸ್, ಕಾರು – 30 ಮಂದಿ ದುರ್ಮರಣ
Advertisement
ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಪಾವತಿಗಾಗಿ ಯುಪಿಐ ಬಳಕೆಗೆ ಅನುಮತಿ ನೀಡಲಾಗಿದೆ. ಮೊದಲು ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ G20 ದೇಶಗಳ ಪ್ರಯಾಣಿಕರಿಗೆ ಅನುಮತಿ ಕಲ್ಪಿಸಲಾಗಿದೆ. 12 ನಗರಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k