ಚೆನ್ನೈ: ಭಾರತೀಯ ರಿಸರ್ವ್ ಬ್ಯಾಂಕ್‌ನ (Reserve Bank of India) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಇಂದು (ನ.26) ಬೆಳಿಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಉದಯಪುರ ಅರಮನೆ ಪ್ರವೇಶಕ್ಕೆ ನಿರಾಕರಣೆ – ಬೆಂಬಲಿಗರಿಂದ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ
ಕಾರ್ಯನಿಮಿತ್ತವಾಗಿ ಗವರ್ನರ್ ಶಕ್ತಿಕಾಂತ ದಾಸ್ ಅವರು ಸೋಮವಾರ (ನ.25) ಚೆನ್ನೈಗೆ ಭೇಟಿ ನೀಡಿದ್ದರು. ಎದೆಯುರಿಯಿಂದ ಬಳಲುತ್ತಿದ್ದ ಅವರನ್ನು ಇಂದು (ನ.26) ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ ಅಪೋಲೋ ಆಸ್ಪತ್ರೆ, ನಿನ್ನೆ ಎದೆಯುರಿಯಿಂದ ಬಳಲಿದ ಪರಿಣಾಮ ಶಕ್ತಿಕಾಂತ ದಾಸ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಲಾಗಿದ್ದು. ಅವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ಮುಂದಿನ 2-3 ಗಂಟೆಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದೆ.ಇದನ್ನೂ ಓದಿ: ಕಾರಿನ ಮೇಲೆ ಬಿದ್ದ ಮೆಟ್ರೋ ಬ್ರಿಡ್ಜ್‌ನ ಸಿಮೆಂಟ್ ತುಂಡು – ನಮ್ಮ ಮೆಟ್ರೋ ವಿರುದ್ಧ ಮಾಲೀಕನ ಆಕ್ರೋಶ