ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಣ್ಣ ಕೈಗಾರಿಕಾ ಉದ್ಯಮಗಳಿಗೆ 50 ಸಾವಿರ ಕೋಟಿ ರೂಪಾಯಿ ನೆರವು ನೀಡಿದೆ.
ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಾಕಷ್ಟು ಕುಸಿತವಾಗಿದೆ. ಹೀಗಾಗಿ ರಾಜ್ಯಗಳಿಗೆ ಹಣಕಾಸು ನೆರವನ್ನು ಘೋಷಣೆ ಮಾಡಿದೆ. ಕೊರೊನಾ ವೈರಸ್‍ನಿಂದ ದೇಶದ ಮೇಲೆ ಆರ್ಥಿಕವಾಗಿ ತುಂಬಾನೇ ಪರಿಣಾಮ ಬೀರಿದೆ. ಒಂದು ಕಡೆ ಮೊಬೈಲ್ ಬ್ಯಾಂಕಿಂಗ್ ಏರಿಕೆಯಾಗಿದೆ. ಆದರೆ ಆಟೋಮೊಬೈಲ್ ಉತ್ಪಾದನೆ ಕುಸಿತವಾಗಿದೆ. ಸುಮಾರು 1 ಲಕ್ಷ 20 ಸಾವಿರ ಕೋಟಿ ರೂಪಾಯಿ ಹೊಸ ಕರೆನ್ಸಿ ಚಲಾವಣೆಗೆ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
Advertisement
It has been decided to provide special refinance facilities for an amount of Rs 50,000 crores to National Bank for Agriculture & Rural Development, Small Industries Development Bank of India, and National Housing Bank to enable them to meet sectoral credit needs: RBI Governor pic.twitter.com/THfzm2O4qm
— ANI (@ANI) April 17, 2020
Advertisement
ಕೈಗಾರಿಕೆ ಮೇಲೆ ಕೊರೊನಾ ತುಂಬಾ ಪರಿಣಾಮ ಬೀರಿದೆ. ಹೀಗಾಗಿ ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ನೆರವು ಘೋಷಣೆ ಮಾಡಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್‌ಬಿಐ ಬರೋಬ್ಬರಿ 50 ಸಾವಿರ ಕೋಟಿ ನೆರವು ನೀಡಿದೆ. ನಬಾರ್ಡ್ ಗೆ 25 ಸಾವಿರ ಕೋಟಿ, ರಾಷ್ಟ್ರೀಯ ಗೃಹ ಬ್ಯಾಂಕ್ (ಎನ್‍ಎಚ್‍ಬಿ)ಗೆ 10 ಸಾವಿರ ಕೋಟಿ, ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್(ಎಸ್‍ಐಡಿಬಿಐ)ಗೆ 15 ಸಾವಿರ ಕೋಟಿ ನೆರವು ನೀಡಿದೆ.
Advertisement
It has been decided to reduce the fixed reverse repo rate under liquidity adjustment facility (LAF) by 25 basis points from 4% to 3.75%, with immediate effect: RBI Governor Shaktikanta Das pic.twitter.com/oKxl5062Y1
— ANI (@ANI) April 17, 2020
Advertisement
ಅಷ್ಟೇ ಅಲ್ಲದೇ ಆರ್‌ಬಿಐನಿಂದ ಹೆಚ್ಚುವರಿ ಕ್ರಮಗಳನ್ನ ಘೋಷಣೆ ಮಾಡಿದ್ದು, ದೇಶದಲ್ಲಿ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ವಲಯಗಳಿಗೆ ಹಣ ಚಲಾವಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಆರ್‌ಬಿಐನಿಂದ ಸಾಲ ಪಡೆಯುವ ಮಿತಿಯನ್ನು ಶೇ.60ಕ್ಕೆ ಹೆಚ್ಚಿಸಿದ್ದು, ಕಂಪನಿಗಳಿಗೆ ಸಾಲ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡಿದೆ.
ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಲಾಗಿರುವ ಸಾಲದ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ರಿವರ್ಸ್ ರಿಪೋ ರೇಟ್ ಶೇ.25 ರಷ್ಟು ಕಡಿತ ಮಾಡಿದೆ. ಇನ್ನೂ ಬ್ಯಾಂಕ್‍ಗಳು ಷೇರುದಾರರಿಗೆ ಯಾವುದೇ ಲಾಭಂಶ ನೀಡುವಂತಿಲ್ಲ ಎಂದು ಆರ್‌ಬಿಐ ಘೋಷಣೆ ಮಾಡಿದೆ.
Contraction in exports in March 2020 at 34.6%, turned out to be much more severe than during the Global Financial Crisis. However, amidst all this, the level of Forex Exchange Reserves which we have continue to be robust: RBI Governor Shaktikanta Das pic.twitter.com/yANpNYo75o
— ANI (@ANI) April 17, 2020