ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಶುಕ್ರವಾರ ಹೊಸ ಗ್ರಾಹಕರನ್ನು ಸೇರ್ಪಡೆಗೊಳಿಸದಂತೆ ಸೂಚಿಸಿದೆ.
ವರದಿಗಳ ಪ್ರಕಾರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಸೆಕ್ಷನ್ 35ಎ ಹಾಗೂ ಬ್ಯಾಂಕಿಂಗ್ ರೆಗ್ಯುಲೇಶನ್ ಆ್ಯಕ್ಟ್ 1949 ಅನ್ನು ವಿಧಿಸಿದೆ. ಹೀಗಾಗಿ ಆರ್‌ಬಿಐ ಪೇಟಿಎಂ ಹೊಸ ಗ್ರಾಹಕರನ್ನು ನಿರ್ಬಂಧಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
Advertisement
Advertisement
ಪೇಟಿಎಂನಲ್ಲಿ ಸದ್ಯ ಐಟಿ ಲೆಕ್ಕ ಪರಿಶೋಧನೆ ನಡೆಯುತ್ತಿದ್ದು, ಈ ಕ್ರಮ ಮುಗಿದ ಬಳಿಕ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ
Advertisement
Action against Paytm Payments Bank Ltd under section 35 A of the Banking Regulation Act, 1949https://t.co/tqWfwt7mT3
— ReserveBankOfIndia (@RBI) March 11, 2022
Advertisement
ಪೇಟಿಎಂ ಡಿಸೆಂಬರ್‌ನಲ್ಲಿ ನಿಗದಿತ ಪಾವತಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಆರ್‌ಬಿಐ ಅನುಮೋದನೆಯನ್ನು ಪಡೆದಿತ್ತು. ಹೀಗೆ ತನ್ನ ಹಣಕಾಸು ಸೇವೆಗಳ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿತ್ತು. ಇದೀಗ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ.