ಕೊಪ್ಪಳ: ಮುಸ್ಲಿಮರ (Muslims) ಮದುವೆ ಕಾಂಟ್ರ್ಯಾಕ್ಟ್ ಮ್ಯಾರೇಜ್. ಅವರದ್ದು ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರರ, ಶಾಸಕ ಬಸವರಾಜ್ ರಾಯರೆಡ್ಡಿ (Basavaraj Rayareddy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ (Koppala) ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಸ್ಲಿಮರ ಮದುವೆ ನೋಂದಣಿ ಆಗುತ್ತದೆ. ಮುಸ್ಲಿಮರ ಗುರುಗಳು ನೋಂದಣಿ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರದ್ದು ಕಾಂಟ್ರ್ಯಾಕ್ಟ್ ಮ್ಯಾರೇಜ್ ಬೇಡ ಎಂದರೆ ಬಿಟ್ಟು ಬಿಡುತ್ತಾರೆ ಅದರಲ್ಲೇನು ತಪ್ಪಿಲ್ಲ. ಅವರದ್ದು ಹಿಂದುಗಳ ರೀತಿ ಏಳೇಳು ಜನುಮದ ಬಂಧ ಅಲ್ಲ ಎಂದರು. ಇದನ್ನೂ ಓದಿ: ಸೆಂಚುರಿ ಬಾರಿಸಿದ್ದಕ್ಕೆ ಪಾಕ್ ಸೂಪರ್ ಲೀಗಲ್ಲಿ ಸಿಕ್ಕಿದ್ದು ಹೇರ್ ಡ್ರೈಯರ್!
ನರೇಂದ್ರ ಮೋದಿ (Narendra Modi) ಗೊತ್ತಿದ್ದು, ಮಾತನಾಡುತ್ತಾರೋ ಏನೋ ಗೊತ್ತಿಲ್ಲ. ಮೋದಿ ಮಾತಾಡಿದ್ದು ತಪ್ಪು. ಮುಸ್ಲಿಮರ ಸ್ಥಿತಿ-ಗತಿ ತೀರಾ ಹೀನಾಯವಾಗಿದೆ. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯಾಗಿದೆ ಎನ್ನುವ ಓಬಿಸಿ ಮೀಸಲಾತಿ ತೆಗೆದು, ಮುಸ್ಲಿಮರಿಗೆ ನೀಡುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್
ಇದು ಜಾತಿ ಗಣತಿ ಅಲ್ಲ. ಇದು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ-ಗತಿ ತಿಳಿಯುವ ಗಣತಿಯಾಗಿದೆ. 2015-16ರಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿಸಿದ್ದಾರೆ. ಇದು ಸ್ವಾಗತಾರ್ಹವಾಗಿದೆ. ಶಿಕ್ಷಕರು ಮನೆ-ಮನೆಗೆ ಹೋಗಿ ಗಣತಿ ಮಾಡಿದ್ದಾರೆ. 100% ಗಣತಿ ಆಗಲು ಸಾಧ್ಯವಿಲ್ಲ. ನಾನು ಕಳೆದ 1 ವರ್ಷದ ಹಿಂದೆ ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದೇನೆ. ಸದ್ಯ 34 ಮಂತ್ರಿಗಳ ಕೈಯಲ್ಲಿ ಮಾತ್ರ ಗಣತಿ ವರದಿ ಇದೆ ಎಂದರು. ಇದನ್ನೂ ಓದಿ: ಮೋದಿ ಇನ್ನೊಂದು ವರ್ಷವಷ್ಟೇ ಪ್ರಧಾನಿಯಾಗಿರುತ್ತಾರೆ: ಸಂತೋಷ್ ಲಾಡ್
ಪತ್ರಿಕೆಯಲ್ಲಿ ಬಂದಿರುವ ವಿಚಾರ, ವರದಿಯಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಯಾರೂ ಅಧಿಕೃತವಾಗಿ ಹೇಳಿಲ್ಲ. ಅದಕ್ಕಾಗಿ ಈಗಲೇ ಈ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ಯಾವುದೇ ಜಾತಿ-ಧರ್ಮದವರು ವಿರೋಧ ಮಾಡಬಾರದು. ಇದನ್ನು ಜಾರಿ ಮಾಡಿದರೆ ಸಿದ್ದರಾಮಯ್ಯನವರ ಘನತೆ ಹೆಚ್ಚುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಪ್ರಧಾನಿಯಾಗಬೇಕೆಂದು ಬರಿಗಾಲಲ್ಲಿ ನಡೆದಾಡುವ ಪ್ರತಿಜ್ಞೆ – 14 ವರ್ಷದ ಕನಸು ಕೊನೆಗೂ ನನಸು
ಯಾವ ಸಮುದಾಯಕ್ಕೆ ಏನು ನೀಡಬೇಕು ಎಂಬುದಕ್ಕೆ ಸಹಕಾರ ಆಗಲಿದೆ. ಬೇರೆ ಬೇರೆ ಕಾರಣಕ್ಕೆ ಬಿಜೆಪಿಯವರು ವಿರೋಧ ಮಾಡುತ್ತಾರೆ. ಲಿಂಗಾಯತ ಸಮಾಜದ ಶಾಸಕರು, ಸಚಿವರು ಮಾತ್ರವಲ್ಲದೇ ಎಲ್ಲಾ ಲಿಂಗಾಯತ ಮುಖಂಡರನ್ನೆಲ್ಲಾ ಕರೆದು ಮಾತನಾಡಿ ಎಂದು ಶಂಕರ್ ಬಿದರಿ ಅವರಿಗೆ ಹೇಳಿದ್ದೇವೆ. ಸಿದ್ದರಾಮಯ್ಯ ಸಾಮಾಜಿಕ ವಿಜ್ಞಾನದಲ್ಲಿ ಮಾಸ್ಟರ್ ಆಗಿದ್ದಾರೆ ಎಂದರು. ಇದನ್ನೂ ಓದಿ: ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಅರೆಸ್ಟ್ – ಭಾರತಕ್ಕೆ ಹಸ್ತಾಂತರಿಸಲು ಸಿಬಿಐ ಮನವಿ
ಗಣತಿಯಲ್ಲಿ ತಪ್ಪು ಇದ್ದರೆ ತಿದ್ದಬಹುದು. ಬ್ರಾಹ್ಮಣ, ಜೈನ ಸೇರಿ ಬಿಟ್ಟರೇ ಉಳಿದೆಲ್ಲರಿಗೂ ಓ.ಬಿ.ಸಿ. ಮೀಸಲಾತಿ ಇದೆ. ಶೇ. 85.1ರಷ್ಟು ಮೀಸಲಾತಿ ನೀಡಬೇಕು ಎಂದು ಆಯೋಗ ಶಿಫಾರಸ್ಸು ಮಾಡಿದೆ. ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ತಂದಿದ್ದಾರೆ. ಜಾತಿ ಆಧಾರಿತ ಮೀಸಲಾತಿಗೂ ಸಂವಿಧಾನದಲ್ಲಿ ಅವಕಾಶ ಇಲ್ಲ. ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗಬಾರದು. ಶೇ.10ರಷ್ಟು ಮೀಸಲಾತಿ ನೀಡಿ ಎಂದು ನಾನು ಒತ್ತಾಯ ಮಾಡುತ್ತೇನೆ. ಹಾಗಾಗಿ ಈಗಲೇ ಆತಂಕ ಪಡುವುದು ಸರಿಯಲ್ಲ. ಸಮಾನತೆ ಬರಲು ಇದನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.