ಚಿರು ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಸಮಸ್ತ ಜನತೆಗೆ ಕಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕೋರಮಂಗಲ ಸಂತ ಫ್ರಾಯರಿ ಚರ್ಚ್ ಆಗಮಿಸಿದ್ದ ರಾಯನ್, ತಾಯಿಯ ಜೊತೆ ಜೊತೆಗೆ ಎಲ್ಲರಿಗೂ ಮೇರಿ ಕ್ರಿಸ್ಮಸ್ ಎಂದು ಶುಭಾಶಯ ತಿಳಿಸಿದರು.
Advertisement
ಚರ್ಚ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಡ್ತಿದ್ದೀವಿ. ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ. ನಾನೆಲ್ಲಿದ್ದರೂ ನನ್ನ ಮಗ ಇರಲೇಬೇಕು. ನಾವಿಬ್ರು ಒಂಥರ ಬೆಸ್ಟ್ ಫ್ರೆಂಡ್ಸ್ ಇದ್ದಂಗೆ’ ಎಂದಿದ್ದಾರೆ.
Advertisement
Advertisement
ಇದೇ ಸಂದರ್ಭದಲ್ಲಿ ರಾಯನ್ ರಾಜ್ ಸರ್ಜಾ ಮೇರಿ ಕ್ರಿಸ್ ಮಸ್ ಎಂದರು. ಅದನ್ನು ಕಂಡ ಮೇಘನಾ, ಇವನು ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ. ಡಿಸಂಬರ್ ಬರ್ತಿದ್ದಂತೆ ಎಲ್ಲರಲ್ಲೂ ಕ್ರಿಸ್ ಮಸ್ ಸಡಗರ ಶುರುವಾಗುತ್ತೆ. ಕ್ರಿಸ್ ಮಸ್ ಹಬ್ಬ ಎಂದರೆ ಖುಷಿ ಹಂಚೋದು. ಒಳ್ಳೆಯದನ್ನ ಬಯಸೋದು. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯ ಎಂದರು ಮೇಘನಾ ರಾಜ್.
Advertisement
ಮೇಘನಾ ತಂದೆ, ನಟ ಸುಂದರ್ ರಾಜ್ ಕೂಡ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆಯುತ್ತೇವೆ. ಈ ಭೂಮಿ ಎಲ್ಲರಿಗೂ ಸೇರಿದ್ದು. ಇಲ್ಲಾಗುವ ಪ್ರತಿಕ್ರಿಯೆ ಮತ್ತು ಭಾವನೆ ಏಕಮುಖವಾಗಿರಬೇಕು. ಜನಗಳನ್ನ ಪ್ರೀತಿಸೋದೆ ಪ್ರಮುಖ ಉದ್ದೇಶ. ಪ್ರೀತಿಸೋರ ಜೊತೆಗೆ ಪ್ರೀತಿ ಹಂಚಿಕೊಳ್ಳಬೇಕು. ನಾನು ಮದುವೆ ಆಗಿರೋದು ಪ್ರಮೀಳಾ ಜೋಷಾಯಿ, ಆಕೆ ಕ್ಯಾಥೋಲಿಕ್ ಕ್ರಿಶ್ಚಿಯನ್. ಆಕೆ ಕೂಡ ಗಣೇಶ ಹಬ್ಬ, ಕೃಷ್ಣ ಜಯಂತಿ, ದೀಪಾವಳಿ ಹಬ್ಬಕ್ಕೆ ದೇವಾಲಯಕ್ಕೆ ಬರ್ತಾರೆ. ನಾನು 35 ವರ್ಷದಿಂದ ಕ್ರಿಸ್ ಮಸ್ ಹಬ್ಬಕ್ಕೆ ಚರ್ಚ್ ಗೆ ಬರ್ತೀನಿ. ಇಲ್ಲಿ ಬಂದಾಗ ಇಡೀ ಕುಟುಂಬವನ್ನು ನೋಡ್ತೀವಿ ಎಂದರು.