ಮಾವಿನಕಾಯಿ ಹೆಸರು ಹೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಮಾವಿನಿಂದ ಮಾಡುವ ಎಲ್ಲ ತಿನಿಸು, ಜ್ಯೂಸ್ ಎಂದರೆ ಎಲ್ಲರಿಗೂ ಇಷ್ಟ. ಭಿನ್ನ ಮತ್ತು ಟೇಸ್ಟಿ ರೆಸಿಪಿ ‘ಮಾವಿನಕಾಯಿ ಸಿಹಿ ಪಚಡಿ’ ಮಾಡುವ ವಿಧಾನ ಇಲ್ಲಿದೆ ನೋಡಿ.
Advertisement
ಬೇಕಾಗಿರುವ ಸಾಮಗ್ರಿ:
* ಮಾವಿನಕಾಯಿ- 2
* ಪುಡಿ ಬೆಲ್ಲ – 200 ಗ್ರಾಂ
* ಹಸಿರು ಮೆಣಸಿನಕಾಯಿ – 2
* ಅರಿಶಿನ ಪುಡಿ – 1 ಟೀಸ್ಪೂನ್
Advertisement
* ಸಾಸಿವೆ – 1 ಟೀಸ್ಪೂನ್
* ಕರಿಬೇವು – 1 ಕಡ್ಡಿ
* ಕೆಂಪು ಮೆಣಸಿನಕಾಯಿ – 2
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ – 2 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮಾವಿನಕಾಯಿ ತೊಳೆದು, ಸಿಪ್ಪೆ ತೆಗೆದು ಕ್ಯೂಬ್ ಗಳಾಗಿ ಕತ್ತರಿಸಿಕೊಳ್ಳಿ.
* ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿಯನ್ನು ಕಟ್ ಮಾಡಿಕೊಳ್ಳಿ.
* ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಹಸಿರು ಮೆಣಸಿನಕಾಯಿ, ಕೆಂಪು ಮಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿ.
* ಈ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ, ನೀರು ಕುದಿಯಲು ಆರಂಭವಾಗುತ್ತಿದ್ದಂತೆಯೇ, ಮಾವಿನ ಕ್ಯೂಬ್‍ಗಳನ್ನು ಹಾಕಿ ಅದಕ್ಕೆ ಅರಿಶಿನ ಪುಡಿ, ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
– ಮಾವಿನಕಾಯಿ ಬೆಂದ ನಂತರ, ಎರಡು ಚಿಟಿಕೆ ಉಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ. ಈಗ ಮಾವಿನಕಾಯಿ ಸಿಹಿ ಪಚಡಿ ಸವಿಯಲು ಸಿದ್ಧ.