ಯಾವುದೇ ಬ್ರೇಕ್ ಅಥವಾ ಟೀ ಟೈಮ್‌ನಲ್ಲಿ ಚಿಪ್ಸ್ ಅಥವಾ ಕುರುಕಲು ತಿಂಡಿ ಹಲವರಿಗೆ ಬೇಕೇ ಬೇಕು. ಅಂತಹವರಿಗಾಗಿ ನಾವಿಂದು ಪರ್ಫೆಕ್ಟ್ ಮ್ಯಾಚ್ ಎನಿಸೋ ರೆಸಿಪಿ ಹೇಳಿಕೊಡುತ್ತೇವೆ. ಈ ಹಿಂದೆ ಬಾಳೆಕಾಯಿಯ ಫ್ರೈ ಅನ್ನು ಬ್ಯಾಟರ್ ತಯಾರಿಸಿ ಮಾಡೋದು ಹೇಗೆ ಎಂದು ಹೇಳಿಕೊಟ್ಟಿದ್ದೇವೆ. ಈ ಬಾರಿ ವಿಭಿನ್ನವಾಗಿ ಒಣ ಮಸಾಲೆಯಿಂದ ತವಾ ಫ್ರೈ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಈ ಸ್ಟೈಲ್‌ನಲ್ಲೂ ಒಮ್ಮೆ ಬಾಳೆಕಾಯಿಯ ತವಾ ಫ್ರೈ (Raw Banana Tawa Fry) ಮಾಡಿ ಸವಿಯಿರಿ.
Advertisement
ಬೇಕಾಗುವ ಪದಾರ್ಥಗಳು:
ಬಾಳೆಕಾಯಿ – 2
ಹುರಿ ಕಡಲೆ – 4 ಟೀಸ್ಪೂನ್
ಕೆಂಪು ಮೆಣಸಿನಕಾಯಿ – 4
ಬೆಳ್ಳುಳ್ಳಿ – 2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾಗುವಷ್ಟು
ಹುರಿದ ಉದ್ದಿನ ಬೇಳೆ – 1 ಟೀಸ್ಪೂನ್ ಇದನ್ನೂ ಓದಿ: ಸಖತ್ ರುಚಿ, ಸಿಂಪಲ್ ವಿಧಾನ – ಅಹಮದಾಬಾದಿ ದಾಲ್ ವಡಾ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹುರಿ ಕಡಲೆ, ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು, ಹಾಗೂ ಹುರಿದ ಉದ್ದಿನ ಬೇಳೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ, ಪುಡಿ ಮಾಡಿಕೊಳ್ಳಿ.
* ಬಾಳೆಕಾಯಿಯ ಸಿಪ್ಪೆ ತೆಗೆದು, ತೆಳುವಾದ ಭಾಗಗಳಾಗಿ ಕತ್ತರಿಸಿಕೊಳ್ಳಿ.
* ಈಗ ಬಾಳೆಕಾಯಿ ತುಂಡುಗಳ ಎರಡೂ ಬದಿಯಲ್ಲಿ ಪುಡಿ ಮಾಡಿಟ್ಟುಕೊಂಡಿದ್ದ ಮಿಶ್ರಣವನ್ನು ಹಚ್ಚಿಕೊಳ್ಳಿ.
* ಈಗ ತವಾಗೆ ಎಣ್ಣೆ ಹಾಕಿ, ಬಿಸಿ ಮಾಡಿ. ಬಳಿಕ ಬಾಳೆಕಾಯಿಯ ತುಂಡುಗಳನ್ನಿಟ್ಟು ಫ್ರೈ ಮಾಡಿಕೊಳ್ಳಿ.
* ಬಾಳೆಕಾಯಿ ಎರಡೂ ಬದಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಇದೀಗ ಬಾಳೆ ಕಾಯಿಯ ತವಾ ಫ್ರೈ ತಯಾರಾಗಿದ್ದು, ಟೊಮೆಟೊ ಸಾಸ್‌ನೊಂದಿಗೆ ಚಹಾದ ಸಮಯದಲ್ಲಿ ಸವಿಯಿರಿ. ಇದನ್ನೂ ಓದಿ: ಫೇಮಸ್ ಸ್ಟ್ರೀಟ್ ಫುಡ್ – ಆಲೂಗಡ್ಡೆ ಟ್ವಿಸ್ಟರ್ ಸಿಂಪಲ್ ಆಗಿ ಮನೆಯಲ್ಲೇ ಮಾಡಿ