ಮಂಡ್ಯ: ಸಂಸದರಾಗಿ ನಿಮಗೆ ಏನು ಮಾಡಬೇಕು ಎಂಬ ಜವಾಬ್ದಾರಿ ಇಲ್ಲ ಎಂದು ಸಂಸದೆ ಸಮಲತಾ ಅಂಬರೀಶ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಶಾಸಕರ ಕೆಲಸವನ್ನು ನಾನೇ ಮಾಡುತ್ತಿದ್ದೇನೆ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಸಂಸದರಾಗಿ ಏನು ಮಾಡಬೇಕು ಎಂಬ ಜವಬ್ದಾರಿಯ ಅರಿವಿಲ್ಲ. ಶಾಸಕರಿಗೆ ಸಂಸದರಿಗೆ ಸಾಮಾನ್ಯವಾಗಿ ಅನುದಾನ ಬರುತ್ತದೆ. ಅದನ್ನು ಬಿಟ್ಟು ಬೇರೆ ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಾ ಮೊದಲು ಹೇಳಿ. ನಾನು ಅನುದಾನ ತಂದಿದ್ದೇನೆ. ಬೇಕು ಅಂದರೆ ಲೆಕ್ಕ ಕೊಡುತ್ತೇನೆ. ಆದರೆ ನೀವೇನು ಅನುದಾನ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್
Advertisement
Advertisement
ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ ಬಿಡುಗಡೆಯಾಗಿದೆ. ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಬಿಡುಗಡೆಯಾಗಿದೆ. ಸಂಸದರಾಗಿ ನೀವು ಏನು ಮಾಡುತ್ತಿದ್ದೀರಾ? ಇವರಿಗೆ ಇವರ ಜವಾಬ್ದಾರಿಯ ಅರಿವಿಲ್ಲ. ಕೆ.ಆರ್. ನಗರದಲ್ಲಿ ಸ್ಟೇಟ್ ಫಂಡ್ ಕಾಮಗಾರಿಗೆ ಪೂಜೆ ಮಾಡುವುಕ್ಕೆ ಹೋಗುತ್ತಾರೆ. ಅದರಲ್ಲೂ ಎಂಎಲ್‍ಎ ಬಿಟ್ಟು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್
Advertisement
Advertisement
ಮಂಡ್ಯ ಜಿಲ್ಲೆಗೆ ಸಂಸದರು ಏನು ಕೊಡುಗೆ ಕೊಡುತ್ತಾರೆ ಅಂತ ಜನ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಗೆ ಜನರು ಉತ್ತರ ಕೊಡುತ್ತಾರೆ. ಈಗ ಭ್ರಮ ಲೋಕದಲ್ಲಿ ಇರುವಂತೆ ಕಾಣುತ್ತಾರೆ. ಮಂಡ್ಯ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಮಾಡಿ. ಸಮುದಾಯ ಭವನಕ್ಕೆ ಕೊಟ್ಟಿದ್ದೇನೆ ಅಂತಾರೆ. ಯಾರೇ ಮೆಂಬರ್ ಆದರೂ ಎಂಪಿ ಫಂಡ್ ಬರುತ್ತದೆ.ಸಚಿವರಿಗೆ ಲೆಟರ್ ಕೊಟ್ಟು ಫೇಸ್ ಬುಕ್ ವಾಟ್ಸ್ ಆಫ್‍ನಲ್ಲಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ಏನಾದರೂ ಹೊಸ ಯೋಜನೆ ತಂದಿದ್ದೇನೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲಿ ಎಂದಿದ್ದಾರೆ.
ನೀವು ಗೆದ್ದಿದ್ದು ಅಂಬರೀಶ್ ಹೆಂಡತಿ, ಅಂಬರೀಶ್ ಅವರು ಅಕಾಲಿಕವಾಗಿ ಮರಣಹೊಂದಿದರು ಎನ್ನುವ ಗೌರವಾರ್ಥದಲ್ಲಿ ಜನರು ಗೆಲ್ಲಿಸಿದ್ದಾರೆ. ಇದು ಎಲ್ಲಾ ಟೈಂನಲ್ಲಿಯೂ ನಡೆಯುವುದಿಲ್ಲ. ಅಂಬರೀಶ್ ಅವರು 25 ವರ್ಷ ಎಂಪಿಯಾಗಿ ಅನುಭವಿಸಿದ್ದಾರೆ. ಆದರೆ ಮಂಡ್ಯ ಇದ್ದಂತೆಯೇ ಇದೆ. ಆದರೆ ಪಕ್ಕದಲ್ಲಿರುವ ಹಾಸನ ಜಿಲ್ಲೆ ಅಭಿವೃದ್ಧಿಯಾಗಿದೆ. ಈಗಲಾದರೂ ಹೆಚ್ಚೆತ್ತು ಹೋರಾಟ ಮಾಡಿ ವಿಶೇಷ ಅನುದಾನ ತೆಗೆದುಕೊಂಡು ಬನ್ನಿ. ಜನರಿಗೆ ಗೊಂದಲ ಸೃಷ್ಟಿ ಮಾಡಿ. ಮುಗ್ದ ಜನರು ಹೊಡೆದಾಡುವಂತೆ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ.