ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಜಡೇಜಾ ಶತಕ ಸಿಡಿಸುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರು.
And, here comes the maiden Test ???? for @imjadeja, followed by the declaration by the Indian Captain.#TeamIndia 649/9d
Live – https://t.co/RfrOR7MGDV @Paytm #INDvWI pic.twitter.com/iaanoBmcp4
— BCCI (@BCCI) October 5, 2018
Advertisement
ಟೀಂ ಇಂಡಿಯಾ ಪರ 6ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಜಡೇಜಾ 5 ಸಿಕ್ಸರ್, 5 ಬೌಂಡರಿಗಳ ಮೂಲಕ 75.75 ಸರಾಸರಿಯಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ 55ನೇ ಇನ್ನಿಂಗ್ಸ್ (38 ಪಂದ್ಯ)ಗಳಲ್ಲಿ ಶತಕದ ಸಾಧನೆ ಮಾಡಿದರು. ಈ ಹಿಂದೆ ಟೀಂ ಇಂಡಿಯಾ ಪರ ಹರ್ಭಜನ್ ಸಿಂಗ್ 121, ಅನಿಲ್ ಕುಂಬ್ಳೆ 150 ಇನ್ನಿಂಗ್ಸ್ ಗಳಲ್ಲಿ ಮೊದಲ ಶತಕ ಸಿಡಿಸಿದ್ದರು.
Advertisement
FIFTY!@imjadeja celebrates his 10th Test 50 in his unique way ????????
Live – https://t.co/RfrOR7MGDV @Paytm #INDvWI pic.twitter.com/LvarUzwvT5
— BCCI (@BCCI) October 5, 2018
Advertisement
2ನೇ ದಿನದಾಟದದಲ್ಲಿ ಕೊಹ್ಲಿ ಮತ್ತು ಜಡೇಜಾ 6ನೇ ವಿಕೆಟ್‍ಗೆ 64 ರನ್ ಜೊತೆಯಾಟವಾಡಿದರು. 87 ಎಸೆತಗಳಲ್ಲಿ 50 ರನ್ ಸಿಡಿಸಿದರು. ಬಳಿಕ 132 ಎಸೆತಗಳಲ್ಲಿ ಶತಕ ಗಳಿಸಿದರು. ಅರ್ಧ ಶತಕ, ಶತಕ ಗಳಿಸಿದ ವೇಳೆ ತಮ್ಮದೇ ಕತ್ತಿವರಸೆ ಶೈಲಿಯಲ್ಲಿ ಬ್ಯಾಟನ್ನು ಗಾಳಿಯಲ್ಲಿ ಬೀಸಿ ಸಂಭ್ರಮಿಸಿದರು. ಇದುವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಜಡೇಜಾ 9 ಅರ್ಧ ಶತಕಗಳಿಸಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸುವುದರ ಜೊತೆ ಭಾರತದ ಪರ ದಾಖಲೆ ನಿರ್ಮಿಸಿದ ಪೃಥ್ವಿ ಶಾ!
Advertisement
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಪರ ಪೃಥ್ವಿ ಶಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶತಕ ಸಿಡಿಸಿದರೆ, ಚೇತೇಶ್ವರ ಪೂಜಾರಾ, ರಿಷಭ್ ಪಂತ್ ಅರ್ಧ ಶತಕ ಗಳಿಸಿ ಮಿಂಚಿದರು. ತಂಡ 149.5 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 649 ಗಳಿಸಿ ಬೃಹತ್ ಮೊತ್ತ ಗಳಿಸಿದ್ದ ವೇಳೆ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ಇದನ್ನೂ ಓದಿ: ಶತಕ ಸಿಡಿಸಿ ಭಾರತದ ಪರ ದಾಖಲೆ ಬರೆದ ಕೊಹ್ಲಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv