ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 200ನೇ ವಿಕೆಟ್ ಪಡೆದಿದ್ದು, ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಎಡಗೈ ಬೌಲರ್ ಎಂಬ ದಾಖಲೆಯನ್ನು ಬರೆದರು.
ರವೀಂದ್ರ ಜಡೇಜಾ 44ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಈ ಮುನ್ನ ಶ್ರೀಲಂಕಾ ಆಟಗಾರ ರಂಗನಾ ಹೆರಾತ್ 47 ಪಂದ್ಯಗಳಿಂದ 200 ವಿಕೆಟ್ ಪಡೆದಿದ್ದರು. ಈ ಪಟ್ಟಿಯಲ್ಲಿ ನಂತರದ ಸ್ಥಾನವನ್ನು ಆಸೀಸ್‍ನ ಮಿಚೇಲ್ ಜಾನ್ಸನ್ ಪಡೆದಿದ್ದು, 49 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಆ ಬಳಿಕ 49 ಪಂದ್ಯಗಳಲ್ಲಿ ಮಿಚೇಲ್ ಸ್ಟಾರ್ಕ್, 51 ಪಂದ್ಯಗಳಿಂದ ಭಾರತ ಬಿಷನ್ ಬೇಡಿ ಹಾಗೂ ಪಾಕ್‍ನ ವಾಸೀಂ ಅಕ್ರಂ 200 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
Advertisement
That will be stumps on Day 3. 5 wickets for Ashwin, centuries from Elgar & de Kock – SA 385/8 #TeamIndia #INDvSA @Paytm pic.twitter.com/9mCCQXAryu
— BCCI (@BCCI) October 4, 2019
Advertisement
ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್ ಕಳೆದುಕೊಂಡು 385 ರನ್ ಗಳಿಸಿದ್ದು, ಭಾರತ ಪರ ಆರ್.ಅಶ್ವಿನ್ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಉಳಿದಂತೆ ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದ್ದಾರೆ.
Advertisement
ರೋಹಿತ್ ಬೌಲಿಂಗ್: ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕೆ ಇಳಿದು ಶತಕ ಸಿಡಿಸಿದ್ದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೇಳೆ ಬೌಲಿಂಗ್ ಮಾಡುವ ಅವಕಾಶವನ್ನು ಪಡೆದರು. 2 ಓವರ್ ಬೌಲಿಂಗ್ ಮಾಡಿದ ರೋಹಿತ್, 1 ಓವರ್ ಮೇಡನ್ ಮಾಡಿ 3.50 ಎಕಾನಮಿಯಲ್ಲಿ 7 ರನ್ ಬಿಟ್ಟುಕೊಟ್ಟರು. 12 ವರ್ಷಗಳ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು ವಿಶೇಷವಾಗಿತ್ತು.
Advertisement
https://twitter.com/InswingingY/status/1180081028825616385
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಟೂರ್ನಿಗೆ ರೋಹಿತ್ ಆಯ್ಕೆಯಾಗಿದ್ದರೂ ಕೂಡ ಆಡುವ ಅವಕಾಶ ಪಡೆದಿರಲಿಲ್ಲ. ಈ ವೇಳೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಆಟಗಾರ ಹನುಮ ವಿಹಾರಿಗೆ ಅವಕಾಶ ನೀಡಿದ್ದ ಕೊಹ್ಲಿ, ರೋಹಿತ್‍ರನ್ನು ಆಡುವ 11ರ ಬಳಗದಿಂದ ದೂರವಿಟ್ಟಿದ್ದರು. ಸದ್ಯ ರೋಹಿತ್ ಶರ್ಮಾಗೂ ಬೌಲ್ ಮಾಡುವ ಅವಕಾಶ ನೀಡುವ ಮೂಲಕ ಕೊಹ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
#PicOfTheDay ????@ImRo45 with the Ball ????#INDvSA pic.twitter.com/EN9sn0EKea
— Ritika Sajdeh™ (@ImRitika45) October 4, 2019